top of page

ಸುಮ್ಮನೆ

ಸುಮ್ಮನೆ ಹೂ ನಗುವುದಿಲ್ಲ

ತಂಗಾಳಿ ಸೋಕಬೇಕು ;

ನೇಸರನ ಸ್ಪರ್ಶ ಬೇಕು


ಸುಮ್ಮನೆ ಚುಕ್ಕಿಗಳು ಮಿನುಗುವುದಿಲ್ಲ

ಮುಗಿಲಿನ ಸ್ವಚ್ಛತೆ ಬೇಕು;

ಸಂಜೆಗತ್ತಲು ಮುತ್ತಿರಬೇಕು


ಸುಮ್ಮನೆ ಬಳ್ಳಿ ಹಸಿರೊಡೆಯುವುದಿಲ್ಲ

ಪ್ರೀತಿಯ ಒರತೆ ಬೇಕು ;

ಹಬ್ಬಿ ತಬ್ಬಲು ಆಸರೆ ಬೇಕು


ಸುಮ್ಮನೆ ಮಾವು -ಮಲ್ಲಿಗೆ -ಕೋಗಿಲೆ ಜತೆಯಾಗುವುದಿಲ್ಲ

ಚೈತ್ರ ಆಗಮಿಸಿರಬೇಕು ;

ವಸಂತನ ಸಾಂಗತ್ಯ ಬೇಕು


ಸುಮ್ಮನೆ ಸಾಹಿತ್ಯ ಹುಟ್ಟುವುದಿಲ್ಲ

ಭಾವನೆಗಳು ಉಕ್ಕಬೇಕು ;

ಮೌನದ ಧ್ಯಾನ ಬೇಕು


ಸುಮ್ಮನೆ ಬದುಕಾಗುವುದಿಲ್ಲ

ನೋವು - ನಲಿವಲಿ ಬೆಂದಿರಬೇಕು ;

ತನು-ಮನ ಮಾಗಿ ಹಣ್ಣಾಗಿರಬೇಕು


ಶಾಂತಲಾ ರಾಜಗೋಪಾಲ್


ಬೆಂಗಳೂರು

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page