ಎಲ್ಲಿಂದೆಲ್ಲಿಗೆ ಪಯಣ
ಸಾಗಿಬಂದಿದೆ ದೂರ
ಬಂದವರೆಷ್ಟೋ
ಕೂಡಿದವರೆಷ್ಟೋ
ಅಗಲಿದವರೆಷ್ಟೋ
ಹೊಗಳಿದವರೆಷ್ಟು
ತೆಗಳಿದವರೆಷ್ಟು
ಏರಿಳಿತಗಳು
ಅನಿವಾರ್ಯ
ಅದೇ,ಅದೇ
ಹಿಂದಿನದು
ಕ್ಷೇಮ
ಎನಿಸುತ್ತಿದೆಯಲ್ಲ !
ಅಳುವೋ
ನಗುವೋ
ಎದುರಿಸಿ ಬಂದಾಯ್ತು
ಸಾಗಬೇಕು ಮುಂದೆ
ನೆನಪಿನಲೆಗಳ ದಾಟಿ
ಮತ್ತೆ
ನೆನಪುಗಳ ಕಟ್ಟುತ್ತ
******
ಪ್ರೊ.ವೆಂಕಟೇಶ ಹುಣಶೀಕಟ್ಟಿ
Comments