top of page

ಶ್ರೀ ಕ್ಷೇತ್ರ ಯಾಣ!


ದಟ್ಟಾರಣ್ಯ ಮಧ್ಯದಲಿ ಶಿಲಾವರಣ!

ಭೈರವೇಶ್ವರನು ನೆಲೆಸಿಹ ಕ್ಷೇತ್ರ ಯಾಣ!

ಭಸ್ಮಾಸುರನು ಉರಿದು ಬೂದಿಯಾದ ಸ್ಥಾನ!

ನೋಡುಗರ ಕಣ್ಮನಗಳನು ಸೆಳೆವ ಯಾಣ!

*

ಸುತ್ತಲೂ ಗಗನ ಚುಂಬೀ ಹೆಮ್ಮರಗಳು!

ಮಧ್ಯ ಸಮತಳದಲ್ಲಿ ಎರಡು ಶಿಖರಗಳು!

ಬೃಹದ್ಭವ್ಯದ ಭೈರವೇಶ್ವರನ ಶಿಖರ!

ಸೂಜಿಮೊನೆಯಂತಿರುವ ಮೋಹಿನೀ ಶಿಖರ!

*

ಶಿಲಾವರಣದ ಪಕ್ಕ"ಶ್ರೀ ಗಣಪತಿ"ಯ ಗುಡಿ!

ಗುಡಿಯ ಬದಿಯಲಿ ಹರಿಯುತಿದೆ"ಚಂಡಕಿ"ಝರಿ!

ಬೆಟ್ಟದಡೆತಡೆಗಳಲಿ ಚೆಲ್ಲಾಟವಾಡಿ

ಧುಮುಕಿತಹಹ"ವಿಭೂತಿ ಜಲಪಾತ"ವಾಗಿ!


ಬೀರಣ್ಣ ನಾಯಕ ಹೆರವಟ್ಟಾ


ನಮ್ಮ ನಡುವಿನ ಅಪಾರವಾದ ಜೀವನ ಪ್ರೀತಿಯ ಹಿರೆಗುತ್ತಿಯ ಶ್ರೀ ಬೀರಣ್ಣ ನಾಯಕ ಹೆರವಟ್ಟಾ ಅವರು ಸದಾ ಕಾರ್ಯ ನಿರತರು. ಚುಟಕ ರಚನೆಯಲ್ಲಿ ಪರಿಣತರು. ಕಿರಿಯರಿಗು ಹಿರಿತನವ ಕೊಟ್ಟು ಗೌರವಿಸುವ ಗುಣ ಪಕ್ಷಪಾತಿಗಳು. ಉತ್ತರ ಕನ್ನಡದ ನಾಥ ಪಂಥದ ತಾಣ ಯಾಣವನ್ನು ಕುರಿತು‌ ಶ್ರೀಯುತರು ಬರೆದ " ಶ್ರೀ ಕ್ಷೇತ್ರ ಯಾಣ" ಕವನ ನಿಮ್ಮ ಓದು ಮತ್ತು ಪ್ರತಿಸ್ಪಂದನಕ್ಕಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ


*

20 views0 comments

Comments


bottom of page