top of page

🙏ಶಬ್ದ - ಶ್ರದ್ಧಾಂಜಲಿ

ಗದಗ - ಹೊಂಬಳದ ಕನ್ನಡದ ಕುವರ!

"ಚೆಂಬೆಳಕು " ಮನೆಯಿಂದ ಸಾಗಿದರೆ ಬಹುದೂರ!!


ಜೀವಧ್ವನಿಯಾಗಿದ್ದ ಕವಿತೆಗಳ ನೀಡಿ!

ನಾಡಗೀತೆಯ ಸೌಗಂಧ ಎಲ್ಲೆಡೆ ಹರಡಿ!


ಹೋಗ ಬೇಕಲ್ಲಿಗೆ ಎಲ್ಲರೂ -ಒಂದಲ್ಲಾ ಒಂದು ದಿನ!

ಸರಳ ವ್ಯಕ್ತಿತ್ವ - ಸಜ್ಜನಿಕೆಯ ನೆನಪಿಸುವುದು ಮನ!!


ಕಥೆಗಾರ್ತಿ ಶಾಂತಾದೇವಿ - ಹಲವು ಕೃತಿಗಳ ಒಡತಿ!

ಅವರಾಗಿದ್ದರು ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿ!!


ದಯೆಯೇ ಧರ್ಮದ ಮೂಲವೆಂದವರು!

ಪ್ರಶಸ್ತಿ - ಗೌರವಗಳಿಗೆ ಭಾಜನರಾದವರು!!


ಹೊರಟು ಹೋದಿರಾ... ಮಹಾಮನೆಗೆ!!

ಭವ ಬಂಧನವ ಕಳಚಿ ದೇವ ಸನ್ನಿಧಿಗೆ!!


ಕನ್ನಡದಾರತಿಯ ಬೆಳಗಿಸಿದ ಹಿರಿಯ ಕಾವ್ಯ ಚೇತನ!!

ಸಾಹಿತ್ಯದ ಕೊಡುಗೆ - ಸಾರ್ಥಕದ ಬದುಕಿಗೆ ನನ್ನದಿದೋ ನಮನ!!ಸಾವಿತ್ರಿ ಶಾಸ್ತ್ರಿ, ಶಿರಸಿ

ಉತ್ತರಕನ್ನಡ ಜಿಲ್ಲೆ.

32 views0 comments

Comments


bottom of page