ವಿಡಂಬನೆ - ಭತ್ಯೆ

ಅಮ್ಮಾ..... ಅಮ್ಮಾ.....

ಭತ್ಯೆ ಅಂದರೆ ಏನಮ್ಮ?????

ಪ್ರವಾಸ ಭತ್ಯೆ - ಪ್ರಯಾಣ ಭತ್ಯೆ

ದಿನ ಭತ್ಯೆ - ಆತಿಥ್ಯ ಭತ್ಯೆ - ವಾಹನ ಭತ್ಯೆ,

ದಿನಪತ್ರಿಕೆಗಳು ಭತ್ಯೆಯಿಂದ

ಭರ್ತಿಯಾಗಿಹುದಮ್ಮ.....!!


ಸಂಬಳ ಏರಿಕೆ - ಮನೆ ನಿರ್ವಹಣಾ ವೆಚ್ಚದ ಏರಿಕೆ.....

ಅಂದರೆ ಏನಮ್ಮ!!

ಬೆಲೆ ಏರಿಕೆ - ಪೆಟ್ರೋಲ್ ದರ ಏರಿಕೆ

ಇದನ್ನು ಕೇಳುತ್ತ ಇದ್ದೇನಮ್ಮ!!!!


ಅಯ್ಯೋ ಪಾಪ.......

ನಮ್ಮ ಮಂತ್ರಿ - ಮಹೋದಯರಿಗೆ

ಮನೆ ಇಲ್ಲವೇನಮ್ಮ....???

ಅದೇನೋ ಸಿಡಿ - ರೆಸಾರ್ಟ್ ಹಗರಣ...

ಕೇಳಿದ್ದೆನಮ್ಮ!!!!


ಯಾವಾಗಲೊಮ್ಮೆ ಜನರು ಹೇಳುವ ಸಂಬಳ ಏರಿಕೆ ಕೇಳಿದ್ದೇನಮ್ಮ!

ಮನೆ ಬಾಡಿಗೆ ಏರಿಕೆ, ಇತ್ಯಾದಿಗಳ ಪಟ್ಟಿ

ಬಹು ದೊಡ್ಡದೇ ಇದೆಯಮ್ಮ!!!!!!


ಸಂಬಳ ಏರಿಸಿ, ಎನ್ನುತ ಮುಷ್ಕರ ಹೂಡಿದ

ಸಿಬ್ಬಂದಿಗಳ ಸುದ್ದಿ ಕೇಳಿದ್ದೇನಮ್ಮ!

ಸಂಬಳ ಇಲ್ಲದ ಮುಷ್ಕರದ ದಿನಗಳ

ಬಿಸಿ ತಟ್ಟಿದ ಕತೆಯ ಆಲಿಸಿದ್ದೆನಮ್ಮ!!


ಬೇಡಿಕೆ ಮಂಡಿಸೆ.....

ರಸ್ತೆಗೆ ಬರದೇ - ಸದನದ ಒಳಗೆ

ಎಲ್ಲವೂ ನಿರ್ಣಯವಾಯಿತೇ ಅಮ್ಮ!!

ಸಂಬಳ ಏರಿಕೆ... ಇಷ್ಟು ಸಲೀಸು,

ಸರಳವೆಂಬುದು ಗೊತ್ತಿರಲಿಲ್ಲ ಅಮ್ಮಾ!!!!!


ಸಾವಿತ್ರಿ ಶಾಸ್ತ್ರಿ, ಶಿರಸಿ.

1 view0 comments