top of page

ಬಾರೋ ಬಾರು!

ಎಲ್ಲೇ ನಿಂತ್ ಒಗದ್ರೂ

ಕವಿ ತೆಲಿಗೇ

ಬಡೀತಿದ್ದ

ಧಾರ್ವಾಡದ ಕಲ್ಲು,

ಈಗ ಬಡ್ಯಾಕ್ಹತ್ತೇತಿ

ಬಾರೋ ಬಾರಿಗೆ;

ಕಥೀ ಹಿಂಗಿರೂವಾಗ

ಬೇಂದ್ರೆಯಜ್ಜಾ,

ಬಾರೋ ಬಾರೋ

ಸಾಧನಕೇರಿಗಂತ

ಹೆಂಗ್ ಕರೀಲೋ

ನಿನ್ನ ನಮ್ಮೂರಿಗೆ?


ಡಾ. ಬಸವರಾಜ ಸಾದರ

 
 
 

Comments


©Alochane.com 

bottom of page