ಬನ್ನಿರಿ ಗೆಳೆಯರೆ
****************
ಭಾದ್ರಪದ ಶುಕ್ಲದ ಚವತಿಯಂದು
ಮೋದಕ ಪ್ರಿಯ ಬಂದ
ಹಬ್ಬದ ಸಡಗರ ನಮಗೆಲ್ಲ
ಬಿಡದೆ ಹೊತ್ತು ತಂದ
ಹೊಟ್ಟೆ ಡುಮ್ಮಿ
ಅವನಿಗೆ ಆನೆ ಸೊಂಡಿಲು
ಮೂಷಿಕ ವಾಹನ
ಬನ್ನಿರೆಲ್ಲ ಓಡಿ ನೋಡಲು
ಕಡುಬು ತಿಂದು ನಡೆದನು
ಉಸಿರು ಹಾಕುತ
ಅದನು ಕಂಡು ಚಂದ್ರನು
ನಕ್ಕನು ಕೇಕೆ ಹಾಕುತ
ಹೊಟ್ಟೆ ಒಡೆಯಿತು
ಕಡುಬು ಬಿದ್ದವು ಕೆಳಗೆ
ಸಿಟ್ಟಿಗೆದ್ದು ಸಿಕ್ಕ ಹಾವನು
ಬಿಗಿದ ಹೊಟ್ಟೆಗೆ
ವಿಘ್ನೇಶ್ವರ ಬಂದ
ಚಂದ್ರನಿಗೆ ಶಾಪವಿತ್ತವ ಬಂದ
ಪಾರ್ವತಿಯ ಕಂದ ಬಂದ
ಹಬ್ಬದ ಸಡಗರ ಹೊತ್ತು ತಂದ
ನಮೋ ನಮೋ ಗಣಪತಿ
ಶರಣು ನಿನ್ನ ಅಡಿಗೆ ಎನ್ನೋಣ
ಹೊಡೆದೋಡಿಸು ವಿಘ್ನವ
ಎಂದು ಬೇಡಿಕೊಳ್ಳೋಣ
ವಿದ್ಯಾ ಬುಧ್ಧಿಯ
ದಯಪಾಲಿಸುವನೀತ
ಮಕ್ಕಳ ಕರೆಗೆ ಓಗೊಟ್ಟು
ವರವ ಕೊಡುವನೀತ
ಪ್ರೊ.ವೆಂಕಟೇಶ ಹುಣಶಿಕಟ್ಟಿ
ಕವಿ,ಕಾದಂಬರಿ ಕಾರ,ಚಿಂತನ ಶೀಲ ಬರಹಗಾರ,ಬಿಡುವಿರದ ಚಟುವಟಿಕೆಗಳ ಕ್ರಿಯಾಶೀಲ ಗುರು ಪ್ರೊ.ವೆಂಕಟೇಶ ಹುಣಶಿಕಟ್ಟಿ ಅವರ ಚವತಿಯ ಕುರಿತಾದ ಕವನ ನಿಮ್ಮ ಓದಿಗಾಗಿ. ಸಂಪಾದಕ ಆಲೋಚನೆ.ಕಾಂ
ಚಂದ ಕವಿತೆ