-ಕವಿತಾ ಗಿರೀಶ್ ಹೆಗಡೆ
ಬದುಕೊಂದು ಮಣ್ಣಿನ ಗೊಂಬೆ...
ಕೈಗೆ ಸಿಕ್ಕರೆ ಮುಷ್ಟಿಯಲಿ ಮಣ್ಣು...
ಕಳೆದು ಹೋದರೆ ಚಿನ್ನದ ಗೊಂಬೆ...
ಕೂಡಿ ಇಟ್ಟರೆ ಕನ್ನಡಿಯ ಗಂಟು...
ಬದುಕೊಂದು ಹುಚ್ಚು ಮಳೆಯಂತೆ...
ಒಮ್ಮೆ ಕೋಪಿಸಿಕೊಂಡ ಗೆಳತಿಯಂತೆ..
ಮತ್ತೊಮ್ಮೆ ರಚ್ಛೆ ಹಿಡಿಯುವ ಮಗುವಂತೆ...
ಬದುಕ ರಮಿಸಿ, ಮುದ್ದಿಸಿ ಬಾಳ ಬಾಳು...
ಬದುಕೊಂದು ಹುಚ್ಚರ ಸಂತೆಯಂತೆ...
ಬದುಕಿಬಿಡು ಹುಚ್ಚರಲಿ ಹುಚ್ಚನಂತೆ...
ಬುದ್ಧಿವಂತನು ಇಲ್ಲಿ ದೊಡ್ಡ ಹುಚ್ಚನಂತೆ..
ನೀನಿಲ್ಲಿ ಜಾಣನೋ, ದಡ್ಡನೋ ಬಿಡು ನಿನ್ನ ಚಿಂತೆ...
ಬದುಕಿಬಿಡು ನೀ ಜಗದಲ್ಲಿ ಮರುಳನಂತೆ...
ಅಂತೆ ಕಂತೆಯ ಹುಚ್ಚರ ಸಂತೆಯಲ್ಲಿ...
ಪ್ರೀತಿಸಿದರೆ ಬದುಕು ಮುಷ್ಠಿಯಲ್ಲಿದೆ...
ಕುಪಿತಗೊಂಡರೆ ಮುಷ್ಟಿಯಲ್ಲಷ್ಟು ಮರಳು...
00==00
Comments