ನನ್ನೂರು ಹೊನ್ನೂರು
ಅದು ನನ್ನ ಹೆಮ್ಮೆ,
ನಡು,ನಡುವೆ ಕೊಳಪೆಯಲಿ
ಈಜಾಡೋ ಎಮ್ಮೆ.
ಸಣ್ಣ ಅಂಗಡಿಯಲ್ಲೂ
ದೊಡ್ಡ ವ್ಯಾಪಾರ,
ಇಲ್ಲಿಹುದು ಸಣ್ಣವರ
ದೊಡ್ಡ ಸರಕಾರ.
ಸಣ್ಣವರ ಬಾಯಲ್ಲೂ
ದೊಡ್ಡ,ದೊಡ್ಡ ಮಾತು,
ದೋಸೆಯಾ ಜೊತೆಗಿಲ್ಲಿ
ಕಾವಲಿಯೆ ತೂತು.
ಇಲ್ಲುಂಟು ಸಹಬಾಳ್ವೆ
ಹತ್ತೆಂಟು ಜಾತಿ,
ಆದರೂ ಕೆಲವೊಮ್ಮೆ
ಎಲ್ಲರಲು ಕೋತಿ.
ಹೇಗಿರಲಿ,ಎಂತಿರಲಿ
ನನಗಿದೇ ಸ್ವರ್ಗ,
ನನ್ನಜೊತೆ ಕೊನೆವರೆಗು
ಇಲ್ಲಿಯ ನಿಸರ್ಗ.
--ಅಬ್ಳಿ,ಹೆಗಡೆ,*
Comments