ದೂರ-ಹತ್ತಿರ

ಒಮ್ಮೊಮ್ಮೆ

ದೂರ

ಇಷ್ಟಷ್ಟೂ

ಹತ್ತಿರ

ಮೈಗೊತ್ತಿ

ಕೊಳ್ಳುವ

ಬಯಕೆ

ಆತುರ

ತೇಪೆ

ಹಾಕಿದ

ಅಂದದ

ಹಳೆ ಅಂಗಿ

ಬಿಡಲಸಾಧ್ಯ

ರೂಪದ

ಕೂಪ,

ಹೆಸರಿನ

ಕೊಸರು,

ಬಸಿರು

ಬವಣೆ,

ಕಣ್ಸೆಳೆವ

ಬಿಳಿ

ಬಣ್ಣ

ಸುಣ್ಣ,

ಕತ್ತಲೆ

ಒಳಗಿನ

ಭೀಬತ್ಸ

ಬೆತ್ತಲೆ,

ತಂಪು

ಹಸಿರು

ಒಳಗಿನ

ಉಸಿರ

ಬೆಂಕಿ,

ಹುಟ್ಟಿನ

ಒಳಗೇ

ಗುಟ್ಟಾಗಿ

ಅವಿತ

ಮಿಂಚಿನ

ಹೊಂಚು,

ಸಂಚು

ಬದುಕಿನ

ಅಂಚು

ದೂರ

ಇಡಲಾಗದ

ಹತ್ತಿರ,

ನಡುವೆ

ಉತ್ತರ

ಇಲ್ಲದ

ಅನೇಕ

ಪ್ರಶ್ನೆಗಳು...

ಕೊನೆಗೂ

ಉತ್ತರ

ಹತ್ತಿರ

ಸಾವು....!!!


--ಅಬ್ಳಿ,ಹೆಗಡೆ.*

--ದಿ;;-೨೩-೬-೨೦

15 views0 comments