ತೊಟ್ಟು

ಹುತ್ತ ಕಟ್ಟುತ್ತವೆ

ಗೆದ್ದಲ ಹುಳುಗಳು

ಮಣ್ಣ ಕಣ ಕಣ

ಹೆಕ್ಕಿ ತಂದು,

ಹಾವು ಬಂದು

ವಾಸಿಸುತ್ತದೆ ಅದರಲ್ಲಿ

ತನ್ನದೆ ಮನೆಯೆಂದು.

ಮತ್ತೆ, ಹೆಕ್ಕಿ ತಿನ್ನುತ್ತದೆ

ಗೆದ್ದಲುಗಳ ಒಂದೊಂದೂ.

ಬೆವರ ಬಸಿವವರ

ಬವಣೆಯೇ ಹೀಗೆ,

ತಪ್ಪದು ಎಂದೆಂದೂ.


ಡಾ.‌ಬಸವರಾಜ ಸಾದರ

4 views0 comments