top of page

ಚುಟುಕುಗಳು- ಸಾತುಗೌಡ ಬಡಗೇರಿ.

ಅಸೂಯೆ.


ಪಡದಿರು ಅಸೂಯೆ

ನೋಡಿ ಉಳ್ಳವರ.

ಶ್ರಮದಿಂದ ಮೇಲೇಳು

ತಿಳಿದು ಬಲ್ಲವರ.

ಅಸೂಯೆಗೆ ಮದ್ದಿಲ್ಲಾ

ಇದುದೊಡ್ಡ ರೋಗ.

ಮನದಿಂದ ದೂರಾಕು

ಬರುವುದು ಯೋಗ.


ಗುಟ್ಟು.


ಬಳಿಯಿರಲು ಧನಕನಕ

ಗೆಳೆಯರ ದಂಡು.

ಮುತ್ತಿ ಹೊಗಳುತ್ತಾ

ದೋಚುವುದ ಕಂಡು.

ನಿಧಾನವಾಗಿ ತಿಳಿದೇ

ಹೊಗಳುಭಟ್ಟರ ಬಣ್ಣ.

ಎಚ್ಚರದ ನಡೆಯಿಡಲು

ತೆರೆಸಿದರು ನನಕಣ್ಣ.


ವಯಸ್ಸಾದಾಗ.


ಚೈತನ್ಯ ಕುಗ್ಗುವುದು

ವಯಸ್ಸು ಸರಿದಂತೆ.

ಮನದ ತುಂಬೆಲ್ಲಾ

ಸಂಸಾರದ ಚಿಂತೆ.

ಕಾಡುವುದು ಬಿ.ಪಿ

ಶುಗರಿನ ರೋಗ..

ನೆಮ್ಮದಿಗೆ ಮಾಡ್ಬೇಕು

ನಿತ್ಯವು ಯೋಗ.


ಸವಾಲು.


ಜೀವನವೇ ಒಂದು

ಸವಾಲುಗಳ ಕಂತೆ.

ಎದುರಿಸಿ ಜಯಿಸಿನೀ

ಮರೆಯಬೇಕು ಚಿಂತೆ.

ಮಾಡದಿರು ನಿರ್ಲಕ್ಷ

ಹೇ!ಮನುಜ ಎಂದು.

ನಲಿವು ದೂರಾಗುವದು

ನಿನಬಾಳಲ್ಲಿ ಮುಂದು.


ಸಾತುಗೌಡ ಬಡಗೇರಿ.

ಅಂಕೋಲಾ ಉ.ಕ

61 views1 comment
bottom of page