ಖಾದಿ - ಕಾವಿ
- ಆಲೋಚನೆ
- Oct 11, 2022
- 1 min read
ಖಾದಿ ಧರಿಸಿದವರೆಲ್ಲ ಸಜ್ಜನರಲ್ಲ!
ಕಾವಿ ಹಾಕಿದವರೆಲ್ಲ ಸನ್ಯಾಸಿಗಳಲ್ಲ!!
ದುರಾಸೆಯು ಮಿತಿಮೀರಿದೆಯಲ್ಲ!!
ಉಡುಪು ಧರಿಸಿ ಬೂಟಾಟಿಕೆ ಸಲ್ಲ!!
ಒಳಗಿನ ಹೂರಣ ದೇವರೇ ಬಲ್ಲ!!
ಶುಭ್ರತೆ ಖಾದಿ - ತ್ಯಾಗವೇ ಕಾವಿ!!
ಅರ್ಥವ ಅಳವಡಿಸುತ, ಅನುಸರಿಸಿ,
ಶ್ರೇಷ್ಠತೆಯ ಉಳಿಸಬೇಕಾಗಿದೆಯಲ್ಲ!!
ಸಾಮಾಜಿಕ ಧರ್ಮವ ಪಾಲಿಸಿದರೆಲ್ಲ!
ಭೂಮಿಯು ಸ್ವರ್ಗವೇ ಆಗುವುದಲ್ಲ!!!!!!
ಸಾವಿತ್ರಿ ಶಾಸ್ತ್ರಿ, ಶಿರಸಿ
Commentaires