ಕೊರೊನಾ ಬಂದ ನಂತರ
ಹುಟ್ಟಿಕೊಂಡದ್ದು.......
ಲಾಕ್ ಡೌನ್ ಸೀಲ್ ಡೌನ್
ಸೆನಿಟೈಸರ್.... ಮಾಸ್ಕ
ಕಂಟೇನ್ಮೆಂಟ್ ಜೋನ್
ಹೋಮ್ ಕ್ವಾರಂಟೈನ್
ಐಸೋಲೇಶನ್ ವಾರ್ಡ
ಸಾಮಾಜಿಕ ಅಂತರ
ಸರಳ ವಿವಾಹ
ಹುಟ್ಟಿದೂರಿನ ಮಹತ್ವ.........
ಕಳೆದುಕೊಂಡದ್ದು.......?
ಅಂತಿಮ ದರ್ಶನಕ್ಕೂ ದಕ್ಕದ
ಅಮೂಲ್ಯ ಜೀವಗಳು
ಕಲೆಯಲ್ಲೇ ಬದುಕ ಕಟ್ಟಿಕೊಂಡ
ನಾಟಕ- ಯಕ್ಷಗಾನ ಕಲಾವಿದರ
ಕುಣಿಯದ ಬದುಕು
ಅಸ್ತಿತ್ವದ ಉಳಿವಿಗಾಗಿ ದುಡಿವ
ಜೀವಗಳ ಇರುವಿಕೆಯ ಹೋರಾಟ
ಸರಳ ವಿವಾಹದಿಂದ
ವಾದ್ಯದ ಜೊತೆಗೆ ಬದುಕಿಗೂ
ತುಕ್ಕು ಹಿಡಿಸಿಕೊಂಡ ವಾಜಂತ್ರಿಗಳು
ಮುಂದಿರುವ ಕರಾಳ ಭವಿಷ್ಯ
ನೆನೆದ ಮಾನಸಿಕ ನೆಮ್ಮದಿ
ಸಾವಿನ ಎಣಿಕೆಯ ಸರದಿ
ತಮ್ಮತ್ತ ಸುಳಿಯÀಬಹುದೆಂಬ
ಆತಂಕದಲ್ಲೇ ದಿನ ಕಳೆವ
ನೆಮ್ಮದಿ ಮರೆತ ಬದುಕು
-ರವಿ ಎ ನಾಯ್ಕ
Comments