top of page

ಕಂದಯ್ಯ

ನಗುವ ಮಗುವಿನ ಮೊಗದ ಸೊಗವದು

ದುಗುಡವ ಕಳೆದಿತ್ತ/ಜಗಕೆಲ್ಲ

ನಗುವಿನ ಕಲೆ ಕಲಿಸಿತ್ತ.


ಚಂದದ ಕಂದನ ಸುಂದರ ವದನವು

ಚಂದಿರನ ಅಂದವ ಹೊಂದಿತ್ತ/ಕಂಡವರ

ಗೊಂದಲವನೆಲ್ಲ ಹರಿದಿತ್ತ.


ಬಟ್ಟಲುಗಣ್ಣಿನ ದಿಟ್ಟನೆ ನೋಟವು

ಬೆಟ್ಟದ ಕಷ್ಟವ ಕಳೆದಿತ್ತ/ದುಷ್ಟರ

ಗೊಟ್ಟಿಯ ತನವ ಹೋಗಿಸಿತ್ತ.


ಅಳುವಲ್ಲು ಸೆಳೆಯುವ ಕಂದನ ಕಳೆಯು

ಮುಳುವಾದ ನೋವ ಅಳಿಸಿತ್ತ/ದಿನವೆಲ್ಲ

ನಳನಳಿಸುವಂತೆ ಮಾಡಿತ್ತ.


ಮುದ್ದಾದ ತೊದಲಿನ ಕಂದನ ನುಡಿಯು

ಮುದವನ್ನು ನೀಡಿ ನಗಿಸಿತ್ತ/ಮನಕೆಲ್ಲ

ಚಂದದ ಮೋಡಿಯ ತಂದಿತ್ತ.


ಹೆಜ್ಜೆಯಿಡುವ ಕಂದನ ಗೆಜ್ಜೆಯ ನಾದವು

ಅಜ್ಜ ಅಜ್ಜಿಯ ಕುಣಿಸಿತ್ತ/ಮನೆಯನ್ನು

ಸಜ್ಜಿಕೆಯಿಂದ ಸಿಂಗರಿಸಿತ್ತ.

- ಭವಾನಿ ಗೌಡ(ಭುವಿ)

ವಿಜಯಪುರ

14 views0 comments

©Alochane.com 

bottom of page