ಬರಬೇಕಾದವರು
ಬರಲಿಲ್ಲವೇಕೆ?
ತಡವೇಕೆ
ಬಂದವರು ಬೇರೇಕೆ?
ಎಷ್ಟೆಲ್ಲಾ ಹೇಳಬೇಕು
ಕೇಳುವವರೆಲ್ಲಿ?
ಹೇಳಿಹೋದವರ ಪತ್ತೆಯಿಲ್ಲ!
ಅಡಿಗೆ ಮನೆಯಲ್ಲೇ ನೀರು
ಚಿಮ್ಮಿಸುತ್ತೇವೆಂದವರು
ನಲ್ಲಿ ನೀರೂ ನಿಲ್ಲಿಸಿದರು
ಹೊಳೆ,ಹಳ್ಳ ಸಮೃದ್ಧ
ಹೊಲ,ಗದ್ದೆಗೆಲ್ಲ ನೀರು
ಹರಿದದ್ದು ಮಾತ್ರ ಗಟಾರು ನೀರು!
ನೋಟಿನಿಂದ ವೋಟು
ಬಲೆಗೆ ಬೀಳಿಸಿದರು
ಗುದ್ದಾಟಕ್ಕಿಳಿಸಿದವರೆಲ್ಲಿ?
ಐದು ವರ್ಷ ನಿಗದಿ
ಮತ್ತೆ ಹೊಸ ಪರಿಚಯ
ಭರವಸೆಗಳ ಮಹಾಪೂರ!
ನಂಬಿದರು!
ನಂಬಿ ಕೆಟ್ಟರು!
ಮತ್ತೆ ನಿಷ್ಠಾವಂತರ ಮರೆತರು!
ಇಲ್ಲ,ಅವರು ಬರುವುದಿಲ್ಲ
ಯಾಕೆಂದ್ರೆ
ಚುನಾವಣೆ ಇನ್ನೂ ದೂರವಿದೆಲ್ಲ
ಬಂದವರು ಯಾರು ಮತ್ತೆ?
ಚಂದಾ ವಸೂಲಿಯ ಚೇಲಾಗಳು
ಇವರಿಲ್ಲದೆ ಅವರಿಲ್ಲ ಬಿಡಿ!
ವೆಂಕಟೇಶ ಹುಣಶಿಕಟ್ಟಿ
ಪ್ರೊ.ವೆಂಕಟೇಶ ಹುಣಶಿಕಟ್ಟಿ ಅವರು ಜೀವನ ಪ್ರೀತಿಗೆ ಹೆಸರಾದ ಹಿರಿಯರು. ರಾಜಕಾರಣಿಗಳು ಮತ್ತು ಅವರ ಚೇಲಾಗಳ ಬಗ್ಗೆ ಕವಿ ವೆಂಕಟೇಶ ಹುಣಶಿಕಟ್ಟಿ ಅವರ ಕವಿತೆ ನಿಮ್ಮ ಓದು ಮತ್ತು ಸಹ ಸ್ಪಂದನಕ್ಕಾಗಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
コメント