ಆಲೋಚನೀಯ
ಆತ್ಮೀಯರೆ ನಿಮಗಿದೊ ಪ್ರೀತಿಯ ವಂದನೆಗಳು. ಬಹುಕಾಲದ ತರುವಾಯ ನಿಂತು ಬಿಟ್ಟಿದ್ದ ಆಲೋಚನೀಯ ಇಂದು ಚಲನೆಗೆ ಅಣಿಗೊಂಡಿದೆ. ಹಲವು ಏಳು ಬೀಳುಗಳ ನಡುವೆ ಆಲೋಚನೆ.ಕಾಂ ಈ ಪತ್ರಿಕೆ ಜೀವ ಹಿಡಿದು ನಿಂತಿರುವುದೆ ಒಂದು ಅಚ್ಚರಿ!! ಇದನ್ನು ಪ್ರಕಟಿಸುವ ತಂತ್ರದ ಅರಿವಿಲ್ಲದೆ ನಾನು ಚಡ ಪಡಿಸಿದ್ದು, ಈಗ ನೆನಪು. ಪ್ರಕಟಣೆ ಮಾಡುವವರ ಬಿಡುವಿರದ ಕಾರ್ಯ ಬಾಹುಳ್ಯದಿಂದ ಸುಮಾರು ಮೂರು ತಿಂಗಳ ಕಾಲ ಆಲೋಚನೆಯ ಎರಡು ಗ್ರುಪ್ ಮಾತ್ರ ಚಾಲ್ತಿಯಲ್ಲಿದ್ದು ಪತ್ರಿಕೆಯಲ್ಲಿ ಪ್ರಕಟಣೆ ನಿಂತೆ ಬಿಟ್ಟಿತ್ತು. ಅದು ನನ್ನನ್ನು ಬಿಡದೆ ಕಾಡುತ್ತಿತ್ತು. ನಿನ್ನೆ ರಾತ್ರಿ ನನ್ನ ಮಗ ನಿಶಾಂತನ ಪತ್ನಿ ಅನಸೂಯಾ( ಅನು) ತನ್ನ ಬಿಡುವಿರದ ಕೆಲಸದ ಒತ್ತಡದ ನಡುವೆಯು ಇದಕ್ಕೆ ಸಂಬಂಧಿಸಿದ ಆ್ಯಪ ಅನ್ನು ಡೌನ ಲೋಡ ಮಾಡಿ ಪ್ರಕಟಣೆ ಮಾಡುವ ಬಗೆಯನ್ನು ಹೇಳಿಕೊಟ್ಟಳು. ಆಕೆಗೆ ನನ್ನ ಅನೇಕ ಕೃತಜ್ಞತೆಗಳು.
ಪ್ರಿಯರೆ ಇದು ನಿಮ್ಮದೆ ಪತ್ರಿಕೆ. ನೀವು ನಿಮ್ಮ ಬರಹಗಳ ಮೂಲಕ ಮತ್ತು ಓದುವುದರ ಮೂಲಕ ಈ ಪತ್ರಿಕೆಯನ್ನು ಬೆಳೆಸ ಬೇಕಾಗಿ ವಿನಂತಿ. ಕಾವ್ಯ,ಕತೆ,ವಿಮರ್ಶೆ,ವ್ಯಕ್ತಿ ಚಿತ್ರ,ಲಲಿತ ಪ್ರಬಂಧ,ಪರಿಸರ, ಗಿಡಮೂಲಿಕೆ, ಕಲಾ ವಿಮರ್ಶೆ, ವ್ಯಕ್ತಿತ್ವ ವಿಕಸನ, ಪ್ರವಾಸ, ರಾಜಕಾರಣ, ಅಭಿವೃದ್ಧಿ ಚಿಂತನೆ, ಕೃಷಿ,ಉದ್ಯಮ ಇತ್ಯಾದಿ ಅನೇಕ ಸಂಗತಿಗಳ ಕುರಿತ ನಿಮ್ಮ ಬರಹಗಳನ್ನು ನನ್ನ ವಾಟ್ಸಪ್ ನಂಬರ 7975935393. ಗೆ ಕಳಿಸಿಕೊಡ ಬೇಕಾಗಿ ವಿನಂತಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
ಶುಭವಾಗಲಿ ಸರ್ ಮುಂದುವರೆಸಿ.