ಅಜ್ಜಿಯೂರಿನ ಬೇಸಿಗೆ ಇನ್ನು ಹಾಗೆ ಇದೆ, ನನ್ನಜ್ಜಿಯ ಪ್ರೀತಿಯಂತೆ, ಚಿಕ್ಕಂದಿನ ದಿನಗಳು ಮರೆಯುವಂತಿಲ್ಲ. ಬಾಲ್ಯದ ದಿನಗಳೆಲ್ಲ ನಾಲ್ಕಾಣೆಯ ನಿಂಬೆಹುಳಿ, ಶುಂಠಿ ಪೆಪ್ಪರಮೆಂಟನು ಪುಟ್ಟ ಬೊಗಸೆ ತುಂಬ ಹಿಡಿದುಬರುತ್ತಿದ್ದ ರೀತಿಯಲಿ ಕಡು ಮಧುರವಾಗಿ ಹಾಗೆ ಇವೆ, ಗರಿಯ ಗಿರಿಗಿಟ್ಲೆ ಹಿಡಿದು ಸಂಜೆಯಾಟದಲಿ, ಊರಾಚೆ ತಿರುಗಿಸುತ್ತ ಓಡಿದ ನೆನಪುಗಳನ್ನು ಅಮರಗೊಳಿಸುತ್ತವೆ ನೆನೆನೆನೆಯುತ್ತ ಹೇಳಿದಂತೆ. ತೆಂಗಿನ ಗರಿಯಲಿ ಮಾಡಿದ ವಾಚು-ಉಂಗುರಗಳು ನೆನಪಿನ ಕಾಣಿಕೆಗಳು, ತೆಂಗು-ಅಡಕೆಗಳ ಹುಟ್ಟಿನಿಂದ ಮಾಡಿದ ಸವಾರಿ, ಪುರಾಣದ ಕತೆಯಂತೆ ಇತಿಹಾಸ ವನ್ನು ನೆನಪಿಸುವವು ಬೇಸಿಗೆಯ ಉರಿಬಿಸಿಲಲಿ ಬೇಲಿಸಾಲು ತಿರುಗುತ್ತ, ಎಂದೂ ನೋಡಿರದ ಹೊಸತವನು ಹೆಕ್ಕುತ್ತಿದ್ದುದು ಅನುಭವದಲಿ ಅದಕೆ ಮೊದಲ ಪ್ರಾಶಸ್ತ್ಯ ಊರ ಮುಂದಿನ ಕೆರೆಯನು ಊರಾಚೆ ಯ ಊರವರಿಗೆ ದೊಡ್ಡ ಹೊಳೆಯನ್ನೆ ಸೃಷ್ಟಿಸಿದ ಆಳ-ಹರವಿನ ಕೆರೆಯ ದಂಡೆಗಳನ್ನು ಸ್ನೇಹಿತರನ್ನು ಕಟ್ಟಿಕೊಂಡು ತಿರುಗಿದ್ದನ್ನು ಮರೆಯಲಾದರೂ ಆದೀತೇ? ಮೇ ತಿಂಗಳ ಮಳೆಗೆ ಬಾಲ್ಯದ ನನ್ನಂಥ ಓರಗೆ ವಯಸ್ಸಿನವರು ಬೆಚ್ಚದ ದಿನಗಳಿಲ್ಲ, ನಡುರಾತ್ರಿಯ ಗುಡುಗು, ಸಿಡಿಲಿಗೆ ಅಜ್ಜಿಯ ಪಕ್ಕ ಪಕ್ಕದ ಜಾಗಗಲ್ಲಿ ಹೂತು ಹೋಗಿದ್ದಾಗ ಅಜ್ಜಿ ಎಂದರೆ ಆ ಭಯ, ಯಾವ ಗುಡುಗು ಸಿಡಿಲುಗಳು ಹೆದರಿಸಿದರೂ ಅಜ್ಜಿಯ ಮುಂದೆ ನಮ್ಮನೇನು ಮಾಡಲಾರದೆಂದು ಹೇಳಿಕೊಂಡು ಹೊರಳಿಕೊಳ್ಳುತ್ತಿದ್ದ ದಿನಗಳವು. ಮಳೆ ಆದರೂ ಮನೆಗಳನ್ನು ಹಾನಿ ಮಾಡಿ ಹೋದರು, ಬದುಕನು
ಬಡವಾಗಿ ಮಾಡಿ ಬೀದಿಗೆ ತಂದುದಕ್ಕೆ
ಹಿಡಿ ಶಾಪ, ಕೊಚ್ಚಿಕೊಂಡು ಹೋಗಿದ್ದಕ್ಕೆ
ನಟಿಕೆ ಮುರಿತ, ಮಧ್ಯಮನ ಹೊಲದ
ಹೊಂಡ ತುಂಬಿದ್ದಕ್ಕೆ ಮಳೆಗೊಂದು
ಖುಷಿಯ ಕೆನೆತ, ಬದುಕಿದೆ ಈ ಬೆಳೆಗೆಂದು.
ಬದುಕಿದೆ ಹಾಗೆ ಅಜ್ಜಿಯೂರಿನ
ಬೇಸಿಗೆ ಅದೆಷ್ಟು ಕಾಲವಾದರೂ
ಚಿರಯೌವ್ವನಿಗನ ರೀತಿಯಲ್ಲಿ ಹಾಗೆ
ಇದೆ,ತಪ್ಪದೆ,ಕಾಲಕಾಲಕ್ಕೆ ಬಂದು
ಹೋಗಿ ಮಾಡಿ ವಸಂತಕ್ಕೆ ಮೆರಗಿರಿಸಿ
ಲಕ್ಷ್ಮೀ ದಾವಣಗೆರೆ
留言