top of page
ಹೊಸತನ
ಉದಯ ಸೂರ್ಯ ಕಿರಣ ತಂತು ಇಳೆಗೆ ಹೊಸತನ ಜಡ ಕಳೆದು ಬುವಿಯ ಮಡಿಲು ತಳೆಯಿತು ನವಚೈತನ್ಯ ಹೂವು ಅರಳಿ ಗಂಧ ಹರಡಿ ಎಲ್ಲೆಲ್ಲೂ ಘಮಘಮ ಅವನಿಗೊಲವ ತೋರಲು ದಿನಕರನ ಸರಿಗಮ ರವಿಯ ಹೊಂಬಿಸಿಲು ಸೋಕಿ ನಲಿವು ದಿನದಿನ ಸುರಿವ ಕಿರಣ ಧಾರೆಯಲ್ಲಿ ಮಿಂದು ಧರಣಿ ಪಾವನ ಏನು ಮಾಯೆ ರವಿಯ ಲೀಲೆ ವನ ವನವೂ ನಂದನ ಯುಗ ಯುಗವು ಕಳೆದರೂ ದಿನವು ನಿತ್ಯ ನೂತನ ವೆಂಕಟೇಶ ಬೈಲೂರು
bottom of page