ಹೆಮ್ಮೆಯ ನಾಡು ಕನ್ನಡ ನಾಡು
ಕವಿ ವನರಾಗ ಶರ್ಮ ಅವರು ನಮ್ಮ ನಡುವಿನ ಜೀವನ ಪ್ರೀತಿಯ ಸಹ್ಯಾದ್ರಿಯ ಉತ್ತುಂಗ. ಕವಿ,ಕತೆಗಾರ, ವಿಮರ್ಶಕ,ಚಿಂತಕ,ಸಂಸ್ಕೃತಿ ಸಂಪನ್ನ,ಹಲವು ಕೃತಿಗಳನ್ನು ಕನ್ನಡಮ್ಮನ ಉಡಿಗೆ ಹಾಕಿದ ಕನ್ನಡಮ್ಮನ ಕುವರ ಅವರ 'ಹೆಮ್ಮೆಯ ನಾಡು ಕನ್ನಡ ನಾಡು' ಕವಿತೆಗಳನ್ನು ಬಹಳ ಜನ ಗಾಯಕರು ಹಾಡಿ ಖುಷಿಯನ್ನು ಹಂಚಿದ್ದಾರೆ.ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ ಹೆಮ್ಮೆಯ ನಾಡು ಕನ್ನಡ ನಾಡು ಅನುಪಮ ಸಂಸ್ಕೃತಿ ತವರೂರು. ಬಲುಪ್ರಾಚೀನ ಕನ್ನಡ ಜ್ಞಾನ ಕಲೆಸಾಹಿತ್ಯದ ನುಡಿ ತೇರು. ಏಕೀಕರಣದ ಹೋರಾಟದ ಕಣ ತೆರೆಯಿತು ನವ ಕರ್ನಾಟಕವ. ಹರಿಹಂಚಿದ ಸಿರಿಗನ್ನಡ ಕುಲ ಕಂಡಿತು ಏಕತೆ ವೈಭವವ. ಆ ಪುಲಿಕೇಶಿ ಕದಂಬ ಹೊಯ್ಸಳ ಚಾಲುಕ್ಯರಾಳಿದ ಈ ನಾಡು. ಹಂಪೀ ವಿಜಯನಗರವು ಶ್ರವಣ ಬೆಳಗೊಳ ಬೇಲೂರ್ ಹಳೆಬೀಡು. ಕಾವೇರೀ ನದಿ ವರಗೋದಾವರಿ ತುಂಗೆ ಶರಾವತಿ ವರದಾ. ಕಪಿಲಾ ಭೀಮಾ ಕಾಳಿ ಗಂಗಾವಳಿ ಕೃಷ್ಣಾ ಹೇಮಾ ಹರಿದಾ. ಗಂಧದ ಚಿನ್ಧ ತೇಗದ ಹೊನ್ನೆಯ ಕಾಫೀ ಏಲಕ್ಕಿ ಅಡಿಕೆ . ತೆಂಗಿನ ಹಣ್ಣಿನ ತೋಟಕೆ ಬಯಲಿಗೆ ಬೆಟ್ಟ ಗುಡ್ಡದ ಹಿಡಿಕೆ. ಎಂಥಾ ಸುಂದರ ಕನ್ನಡ ಕುವರರ ನಾಡಿದು ಸ್ವರ್ಗಕು ಮಿಗಿಲು. ಶ್ಯದ ಕಾಶಿಗೆ ಹಸಿರಿಗೆ ಹೊನ್ನಿಗೆ ಬೆರಗಾಗಿದೆ ಆಃ ! ಮುಗಿಲು. !! ** ವನರಾಗ ಶರ್ಮಾ