top of page

ಹೂವು

ಬಾಡಿ ಹೋಗುವ ಮುನ್ನ ಮುಡಿಸೇರು ನೀನೊಮ್ಮೆ ಪಾವನವಾಗುವಳು ಮುಡಿದ ಹೆಣ್ಣು. ಮುದುಡಿ ಹೋಗುವ ಮುನ್ನ ಅಡಿಸೇರು ನೀನೊಮ್ಮೆ ಭಕ್ತರನು ಹರಸುವುದು ಶಿವನ ಕಣ್ಣು. ಬೇಲಿ ಹೂವಾಗುವ ಮುನ್ನ ಯೋಚಿಸು ನೀನೊಮ್ಮೆ ಕೆಡವಿದರೆ ಬಿದ್ದು ಸೇರುವೆಯ ಮಣ್ಣು. ಪಾದದಡಿ ಸಿಲುಕುವ ಮುನ್ನ ಪ್ರೇಮಿಗಳ ಸೇರೊಮ್ಮೆ ಬರದಿರಬಹುದು ಅವರ ಬಾಳಲಿ ಹುಣ್ಣು. ಬಾಡಿ ಹೋಗುವ ಮುನ್ನ ತೋರಣದಿ ನಿಲ್ಲೊಮ್ಮೆ ಪರಿಮಳವ ಸವಿಯುವರು ನೆರೆದವರ ಗುಂಪು. ಮಂತ್ರಿಗಳ ಮಾಲೆಯಾಗುವ ಮುನ್ನ ಕೇಳು ನೀ ಒಮ್ಮೆ ಇರುವುದು ನಿಮ್ಮಲ್ಲಿ ಎಷ್ಟು ಹಣ ಕಪ್ಪು. ವಧುವರರ ಕೊರಳಲ್ಲಿ ಮಾಲೆಯಾಗು ನಿನೊಮ್ಮೆ ಬೀಳಬಹುದು ರಾಯಣ್ಣನ ಹೆರುವ ಕನಸು ನಿನ್ನ ಮಹಿಮೆಯ ಸಾರಿ ಹೇಳು ಜಗಕೊಮ್ಮೆ ಬರಬಹುದು ಮನುಜರಿಗೆ ಕೂಡಿ ಬಾಳುವ ಮನಸು. - ಅರುಣ ಎಮ್.ಗೌಡ.ಜೂಗ. ಅಂಕೋಲ.

ಹೂವು
bottom of page