top of page

ಹೂವಿನೊಡನೆ. . . . .

ನಿಮಗೇಕೆ ಮಾರ್ದವದ ಆರ್ದ್ರ-ಭಾವ? ಸಾನಂದವೆಮ್ಮೆದೆಯ ಸ್ಪಂದ-ಜೀವ ನಿಮಗೇಕೆ ಕೋಮಲದ ವಿಮಲ ರೂಪ? ಭೂ-ಮಾತೆ ಬೆಳಗಿಸಿದ ಆತ್ಮದೀಪ ಗಗನಮಂಡಲದೆಲ್ಲ ಮಿನುಗು-ಮೊಗ್ಗು, ನಮ್ಮದೇ ಪ್ರತಿಬಿಂಬ ಕಂಡು ಹಿಗ್ಗು ಘನತಿಮಿರ ಮಧ್ಯದಲು ಕಾಂತಿ-ಬಿಂದು, ನಮ್ಮೆದೆಯ ಮಿಡಿತವದು ನಿತ್ಯವಿಂದು ವ್ಯೋಮವಿದೆ ವ್ಯಾಪ್ತ ವಿಕಸಿಸಲು ಹಾಗೆ, ಬುವಿಯೊಡಲ ಘನಭೂಮ ವ್ಯೋಮವೆಮಗೆ ಶಕ್ತಿಯಲಿ ಹೊಳೆಹೊಳೆವ ಭವ್ಯ-ಕಾಂತಿ, ಪ್ರೇಮದಲಿ ತುಂಬಿರುವೆ ದಿವ್ಯ-ಶಾಂತಿ ಕತ್ತಲನು ಓಡಿಸಲು ಬಿತ್ತಿರುವ ಬೀಜ, ಅರಳುತಿರೆ ಪೂರ್ಣ ವರ್ಣವದು ಓಜ ವಿಶ್ವಶಕ್ತಿಯ ಕೃಪೆಯ ದೀಪ ಸಾಲದು ತಾನು, ಬೇರು ತಾ ದೃಷ್ಟಿಸಿದ ಪರಮ ಸತ್ಯವು ನಾನು ಪ್ರಖರ ಸೂರ್ಯನ ಕಂಡು ಬೆದರಿ ಅಡಗಿದವೇನು? ರೆಪ್ಪೆವಡೆಯದೆ ಅವನ, ಎದೆ ತುಂಬಿಕೊಳುವೆ ನಾನು -ಪುಟ್ಟು ಕುಲಕರ್ಣಿ

ಹೂವಿನೊಡನೆ. . . . .
bottom of page