
ಹು.ವೆಂ.ಚುಟುಕುಗಳು
ಹುಡುಕುತ್ತಲೇ ಇರೋಣ ********************* ಬಂತು ಬಂತು ಬಂತು ೫ಜಿ ಎಲ್ಲಿ ನಮ್ಮ ಗುರೂಜಿ? ಕಳೆದುಹೋಗಿದ್ದಾನೆ ಅಬ್ಬರದಲ್ಲಿ ಸಿಗಲಾರನು ಅವನಿನ್ನು ಸುಲಭದಲ್ಲಿ *************ಹುವೆಂ********** ಸ್ವಲ್ಪ ಯೋಚಿಸಿ ************** ಬರಿ ಬೆನ್ನುಹತ್ತಿದರೆ ೫ ಜಿ ಸಿಗುತ್ತದೇನು ಗಂಜಿ? ಗಂಜಿಗೆ ರೈತನೇ ಬೇಕು ಅವನಿಗಿಷ್ಟು ಮರ್ಯಾದೆ ಕೊಡಲೇಬೇಕು *************ಹುವೆಂ******** ಸಾವಧಾನ ********** ಶಾಸಕರಾಗಿ ಗೆದ್ದು ಬಂದ ಎಲ್ಲರಿಗೂ ಸಿಗುವುದಿಲ್ಲ ಮಂತ್ರಿಸ್ಥಾನ ಕನ್ನಡ ಸಾಹಿತಿಗಳೆಲ್ಲರಿಗೂ ಅಸಾಧ್ಯ ರಾಜ್ಯೋತ್ಸವದ ಮಾನ-ಸನ್ಮಾನ ****************ಹುವೆಂ******* ಎತ್ತು ಮರಿ ಕಸವ **************** ಬೇಕು ಮರಿ ನಿನ್ನಂಥವರು ಕಸವನೆತ್ತಿ ಹಾಕುವವರು ನಿನಗಿಂತಲೂ ಉದ್ದ ಕಸಬರಿಗೆ ಪಳಗಿಸದನು ನಿನ್ನ ನಿಲುವಿಗೆ **************ಹುವೆಂ********* ನಾವಿರುವುದೇ ನಿಮಗಾಗಿ *********************** ನಿಮ್ಮ ಅಮೂಲ್ಯ ಮತ ಕೊಟ್ಟು ಆರಿಸಿ ತನ್ನಿರಿ ಸೇವೆ ಮಾಡಲು ಟೊಂಕ ಕಟ್ಟುವೆವು ಗದ್ದುಗೆ ಸಿಕ್ಕಿದ ಮೇಲೆ ಮುಗಿಯಿತು ಐದು ವರ್ಷ ಆರಾಮವಾಗಿಯೇ ಇರುವೆವು **************ಹುವೆಂ******** ಡೊಂಬರಾಟ ************ ವೋಟಿನ ಆಸರೆ ಪಡೆದುಕೊಂಡು ಚುನಾವಣಾ ಬೇಲಿಯ ದಾಟುವರು ಗತ್ತು ಗೊತ್ತಿಲ್ಲದ ಮಂದಿ ಜೋಲಿ ಹೊಡೆದು ಲಾಗ ಹಾಕುವರು! *************ಹುವೆಂ********* (೧೯೮೨ ರಲ್ಲಿ ಪ್ರಕಟವಾದ "ನೆರಳು"ಎಂಬ ನನ್ನ ಚೌಪದಿ ಸಂಕಲನದೊಳಗಿನವು--ಚೌಪದಿಗಳು) ಪ್ರೊ.ವೆಂಕಟೇಶ ಹುಣಶಿಕಟ್ಟಿ
