ಹೀಗೆ ಒಂದು ಗಪದ್ಯ
*ಹೀಗೇ ಒಂದು ಗಪದ್ಯ....* ಯಾರಾದರೂ 'ಹೇಗೆ?' ಎಂದು ಕಣ್ಣಿಗೆ ಕಂಡಂತೆ ಅನ್ನಬಹುದಾದರೂ 'ಅವರು ಪೂರಾ ಹಾಗೇ' ಎಂದು ಅಳೆವ ಅಳತೆಗೋಲಾದರೂ ಸಮವೇ ಇರುವುದೇ!? ***** ನಮ್ಮನ್ನೇ ಯಾರೋ ಅವರು ಕಂಡಂತೆ, "ಹೀಗೆ ನೀವು,ಹಾಗೆ ನೀವು" ಅಂದರೆ, ಒಪ್ಪಿಕೊಳ್ಳುತ್ತೇವೆಯೇ ಸುಮ್ಮನೆ? ನೀವೆಂದ 'ಅದು ಸರಿ' 'ಇದು ಅಂದೀರಲ್ಲ,ಅದಕೆ ಒಪ್ಪಿಗೆಯಿಲ್ಲ' ಮನದಲ್ಲೇ ಒಮ್ಮೆ ಅನ್ನೋಲ್ವೆ? ***** ಯಾರು ಯಾರಿಗೋ ಬೇಕಾದಂತೇ ಇರಲಿಕ್ಕಾಗದೇ ಹೋದರೂ 'ನಾ ಇರುವುದೇ ಸರಿ' ಅಂದುಕೊಂಡದ್ದೆಲ್ಲ ನಿಜವಾಗಿಯೂ ಸರಿಯೇ? ***** ಸರಿಯೆಂಬುದ್ದೊಂದು ಇದ್ದೇ ಇರುವುದು, ಅದು, ನಾವೇ ಅಂದುಕೊಂಡದ್ದೋ ಯಾರೋ ಅಂದದ್ದೋ ಇವೆರಡೂ ಸುಳ್ಳೇ ಆಗಿ ಅಥವಾ ಹೇಳದೇ ಹೋದರೂ ಯಾರಿಗೋ ತಿಳಿದದ್ದೂ ಆಗಿರಬಹುದು. ಆದರೂ 'ಸರಿಯಾದುದ್ದನ್ನೇ ಕೇಳಬೇಕು ಹೇಳಬೇಕು' ಎಂದು ಬಯಸದವರು ಯಾರೂ ಇರಲಿಕ್ಕೇ ಇಲ್ಲ. ಗಣಪತಿ ಗೌಡ,ಹೊನ್ನಳ್ಳಿ,ಅಂಕೋಲಾ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಗಣಪತಿ ಗೌಡ ಹೊನ್ನಳ್ಳಿ ಅವರು ಪ್ರವೃತ್ತಿಯಲ್ಲಿ ಬರಹಗಾರರು. ಅಪಾರವಾದ ಜೀವನ ಪ್ರೀತಿಯ ಗಣಪತಿ ಅವರ ' ಹೀಗೆ ಒಂದು ಗಪದ್ಯ' ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ