top of page

ಹಗಲಾಯ್ತು ಇರುಳು

ಹಗಲಾವುದು? ರಾತ್ರಿ ಯಾವುದು? ಝಗಮಗಿಸುವ ಬೆಳಕು ಹೀಗಾಗಿ ರಾತ್ರಿ ನಡೆಯುವುದೆಲ್ಲ ಹಗಲಿಗೂ ಮೀಸಲು ನಿಶಾಚರಿಗಳಿಲ್ಲ ಗೂಬೆ ಗಲಾಟೆಯಿಲ್ಲ ನಾಯಿಗಳು ಬೊಗಳುತಿವೆ ಅಷ್ಟೇ ಕೆಲಸ ಹಾಗೇ ರಾತ್ರಿ ಪಾಳೆಯ ಹಗಲಿಡೀ ನಿದ್ರೆ ಬದಲಾಗಿದೆ ಜೈವಿಕ ಗಡಿಯಾರ ಹೇಗಿರಬೇಡ ಆರೋಗ್ಯ? ಹಣ ! ಹಣ ! ಬೇಕು ಉಳಿದದ್ದು ಗೌಣ ! ಗಂಡ ಹಗಲು ನಿದ್ರೆಗೆ ದಾಸ ಹೆಂಡತಿ ಆಫೀಸ್ ಗೆ ಸಂಸಾರ-----? ಸಾಗಿದೆ ಹೀಗೇ----! * ಪ್ರೊ.ವೆಂಕಟೇಶ ಹುಣಶೀಕಟ್ಟಿ

ಹಗಲಾಯ್ತು ಇರುಳು
bottom of page