top of page

ಸ್ವಾಮಿನಿಷ್ಠೆ

ನಮ್ಮ ಮನೆಯಲಿರುವುದೊಂದು ಮುದ್ದು ಮೋತಿ ನಾಯಿ ಹಗಲು ರಾತ್ರಿ ಎನ್ನದೆಯೇ ಮನೆ ಕಾಯುವ ತಾಯಿ ! ಹೋಗಿ ಬರುವ ಜನರ ಕಂಡು ಬಿಡದೆ ಕಾಡುತಿರುವುದು ಎಳೆಯ ಮಕ್ಕಳನ್ನು ಕಂಡರೆ ಆಟ ಆಡುತಿರುವುದು ! ತಿಂಡಿ ತೀರ್ಥ ಕೊಟ್ಟು ಅದಕೆ ಮುದ್ದು ಮಾಡುವ ಪುಟ್ಟ ಬೊಗಳು ನಾಯಿಯನ್ನು ತಡೆದು ಬಾಲ ಎತ್ತಿದ ದಿಟ್ಟ ! ರಾತ್ರಿ ಉಂಡು ಮಲಗಿದಾಗ ನಿದ್ರೆ ಅದಕ್ಕೆ ಜೋರು ಕಳ್ಳ ಬಂದು ಒಡವೆ ಕದ್ದು ಕತ್ತಲಲ್ಲೇ ಪಾರು ! ಬೆಳಿಗ್ಗೆ ಎದ್ದು ಒಡತಿ ನೊಂದು ನಾಯಿಗಿತ್ತಳು ಶಾಪ ಒಳಗೊಳಗೆ ಹೆದರಿಕೊಂಡು ಮುದುಡಿ ಮಲಗಿತು ಪಾಪ ! ನಾಳೆಯೊಳಗೆ ಕಳ್ಳರನ್ನು ಹಿಡಿದು ತರುವೆ ಎಂದಿತು ಬೊಗಳುವುದನ್ನು ಬಿಟ್ಟುಅದು ಹೊಂಚುಹಾಕಿ ಕುಳಿತಿತು ! ಕಳ್ಳ ಹೆಜ್ಜೆ ಇಡುತ ಒಬ್ಬ ಒಳಗೆ ಬಂದು ಕದ್ದನು ಕಾಲು ಕಚ್ಚಿ ಹಿಡಿದು ತಂದು ಒಡತಿ ಎದುರು ಬಿಟ್ಟಿತು ! ಮನೆಯ ಒಡತಿ ಇದನು ಕಂಡು ಹರುಷದಿಂದ ನುಡಿದಳು ಉಂಡ ಮನೆಗೆ ಎರಡು ಬಗೆಯದ ಸ್ವಾಮಿನಿಷ್ಠೆ ಎಂದಳು ! ಪಿ.ಆರ್.ನಾಯ್ಕ ಸ.ಸಂ.ವ್ಯಕ್ತಿ ಹಳದೀಪುರ

ಸ್ವಾಮಿನಿಷ್ಠೆ
bottom of page