top of page

ಸ್ವಾತಂತ್ರ್ಯದ ಸಿರಿ

ಸಹಿಸರು ಯಾರು ಬಂಧನದ ಬದುಕು ನಲಿವಿದೆ ಸ್ವಾತಂತ್ರ್ಯ ಜೀವನದಿ.. ಹಂಗಿನ ಬಾಳದು ನಿತ್ಯವು ಗೋಳು ನರಕ ಯಾತನೆ ತನು ಮನದಿ. ದೇಶದಿ ಇರಲು ಆಂಗ್ಲರ ಆಳ್ವಿಕೆ ಗುಲಾಮರ ತೆರದಲಿ ಬಾಳಿದೆವು.. ಮನದಲಿ ನರಳುತ ಕಷ್ಟವ ಸಹಿಸುತ ಸೇಡಲಿ ಬೆಂದು ಬಳಲಿದೆವು . ನಮ್ಮಯ ನೆಲದಲಿ ಪರಕೀಯರ ದರ್ಪವ ನೋಡುತ ಕೋಪದಿ ನಮ್ಮವರು. ಸ್ವಾತಂತ್ರ್ಯದ ಮಂತ್ರವ ಐಕ್ಯದಿ ಪಠಿಸುತ ಬೆಂಕಿಯ ಕಾರುತ ಸಿಡಿದಿಹರು. ಭಾರತ ಮಾತೆಯ ಕಲಿಗಳ ಕಿಚ್ಚಿಗೆ ನಡುಗಿತು ಆಂಗ್ಲರ ಗುಂಡಿಗೆಯು.. ದೇಶವ ತೊರೆದರು ಮದ್ಯ ರಾತ್ರಿಯಲಿ ಕೊಟ್ಟರು ಸ್ವಾತಂತ್ರ್ಯದ ಉಡುಗೊರೆಯ ದೇಶವು ನಲಿದಿದೆ ಜಗದಲಿ ಇಂದು ವಿಶ್ವ ಗುರು ಎಂಬ ಖ್ಯಾತಿಯಲಿ. ಸಂತಸ ಸಡಗರ ಚಿಮ್ಮಲು ಕಾರಣ ಸ್ವರಾಜ್ಯ ಎನುವ ಶಕ್ತಿಯಲಿ. ಸಾತುಗೌಡ ಬಡಗೇರಿ.ಅಂಕೋಲಾ ಉ.ಕ. ರ್ಕನಾಟಕದ ಬಾರ್ವಿಡೋಲಿ ಎಂದು ಹೆಸರಾದ ಅಂಕೋಲೆಯ ಕವಿ ಸಾತು ಗೌಡ ಬಡಗೇರಿ ಅವರ ಸ್ವಾತಂತ್ರ್ಯದ ಸಿರಿ ಕವನ ನಿಮ್ಮ ಓದಿಗಾಗಿ- ಸಂಪಾದಕ

ಸ್ವಾತಂತ್ರ್ಯದ ಸಿರಿ
bottom of page