top of page

ಸ್ವಯಂಭೂ

ನನ್ನ ಕಡೆದುಕೊಂಡ ಶಿಲ್ಪಿ ನಾನೇ... ಅವರಿವರ ಹಾಗೆ ಆಗದೆ ನಾನು ನನ್ನ ಹಾಗೇ ಆಗಬೇಕೆಂದುಕೊಂಡೆ ನನ್ನ ಆಕಾರ ನನ್ನ ನಡೆನುಡಿ ನನ್ನ ‌ನೀತಿ ನಿಲುವು ನನ್ನ ಯೋಚನೆ ನನ್ನ ಸಾಮರ್ಥ್ಯ ಎಲ್ಲವೂ ಹೀಗೇ ಇರಬೇಕೆಂದುಕೊಂಡೆ ನೀನು ಅವರ ಹಾಗೆ ನೀನು ಇವರ ಹಾಗೆ ನೀನು ಇನ್ಯಾರದೋ ಹಾಗೆ ಎಂದೆಲ್ಲ ಹೇಳುವುದು ನನಗೆ ಬೇಕಿರಲಿಲ್ಲ ಕೊನೆಗೊಮ್ಮೆ ನನ್ನನ್ನು ನಾನೇ ಕಟೆದುಕೊಂಡೆ ನನ್ನ ರೂಪ , ನನ್ನ ಗುಣ, ನನ್ನ ಆಕಾರ ಹೇಗೇ ಇರವಲ್ಲದ್ಯಾಕೆ ಬೇರೆ ಯಾರೂ ನನ್ನ ಹೊಗಳಬೇಕಿಲ್ಲ ನನಗೆ ಒಂದೇ ಸಮಾಧಾನ ನಾನು ನನ್ನ ಹಾಗೆಯೇ ಇದ್ದೇನೆ ಯಾರ ನಕಲೂ ಅಲ್ಲ... - ಎಲ್. ಎಸ್. ಶಾಸ್ತ್ರಿ ಹಿರಿಯರಾದ ಶ್ರೀ‌ಎಲ್.ಎಸ್.ಶಾಸ್ತ್ರಿ ಅವರ ಸ್ವಯಂಭೂ‌ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ ಆಲೋಚನೆ.ಕಾಂ

ಸ್ವಯಂಭೂ
bottom of page