top of page

ಸುಮ್ಮನೆ

ಸುಮ್ಮನೆ ಹೂ ನಗುವುದಿಲ್ಲ ತಂಗಾಳಿ ಸೋಕಬೇಕು ; ನೇಸರನ ಸ್ಪರ್ಶ ಬೇಕು ಸುಮ್ಮನೆ ಚುಕ್ಕಿಗಳು ಮಿನುಗುವುದಿಲ್ಲ ಮುಗಿಲಿನ ಸ್ವಚ್ಛತೆ ಬೇಕು; ಸಂಜೆಗತ್ತಲು ಮುತ್ತಿರಬೇಕು ಸುಮ್ಮನೆ ಬಳ್ಳಿ ಹಸಿರೊಡೆಯುವುದಿಲ್ಲ ಪ್ರೀತಿಯ ಒರತೆ ಬೇಕು ; ಹಬ್ಬಿ ತಬ್ಬಲು ಆಸರೆ ಬೇಕು ಸುಮ್ಮನೆ ಮಾವು -ಮಲ್ಲಿಗೆ -ಕೋಗಿಲೆ ಜತೆಯಾಗುವುದಿಲ್ಲ ಚೈತ್ರ ಆಗಮಿಸಿರಬೇಕು ; ವಸಂತನ ಸಾಂಗತ್ಯ ಬೇಕು ಸುಮ್ಮನೆ ಸಾಹಿತ್ಯ ಹುಟ್ಟುವುದಿಲ್ಲ ಭಾವನೆಗಳು ಉಕ್ಕಬೇಕು ; ಮೌನದ ಧ್ಯಾನ ಬೇಕು ಸುಮ್ಮನೆ ಬದುಕಾಗುವುದಿಲ್ಲ ನೋವು - ನಲಿವಲಿ ಬೆಂದಿರಬೇಕು ; ತನು-ಮನ ಮಾಗಿ ಹಣ್ಣಾಗಿರಬೇಕು ಶಾಂತಲಾ ರಾಜಗೋಪಾಲ್ ಬೆಂಗಳೂರು

ಸುಮ್ಮನೆ
bottom of page