top of page

ಸಾಗಿದೆ ಪಯಣ

ಎಲ್ಲಿಂದೆಲ್ಲಿಗೆ ಪಯಣ ಸಾಗಿಬಂದಿದೆ ದೂರ ಬಂದವರೆಷ್ಟೋ ಕೂಡಿದವರೆಷ್ಟೋ ಅಗಲಿದವರೆಷ್ಟೋ ಹೊಗಳಿದವರೆಷ್ಟು ತೆಗಳಿದವರೆಷ್ಟು ಏರಿಳಿತಗಳು ಅನಿವಾರ್ಯ ಅದೇ,ಅದೇ ಹಿಂದಿನದು ಕ್ಷೇಮ ಎನಿಸುತ್ತಿದೆಯಲ್ಲ ! ಅಳುವೋ ನಗುವೋ ಎದುರಿಸಿ ಬಂದಾಯ್ತು ಸಾಗಬೇಕು ಮುಂದೆ ನೆನಪಿನಲೆಗಳ ದಾಟಿ ಮತ್ತೆ ನೆನಪುಗಳ ಕಟ್ಟುತ್ತ ****** ಪ್ರೊ.ವೆಂಕಟೇಶ ಹುಣಶೀಕಟ್ಟಿ

ಸಾಗಿದೆ ಪಯಣ
bottom of page