top of page

ಸಹೃದಯಜೀವಿ...

ಇನ್ನೊಂದು ಹೆಜ್ಜೆಯನು ಎಲ್ಲಿಡಲಿ ಎನ್ನುತಲಿ ಮೂಲೋಕ ವ್ಯಾಪಿಸಿದ ಸಾಕಲ್ಯಮೂರ್ತಿ ಕನ್ನಡದ ಕೈಂಕರ್ಯ ಸತತ ನಡೆಸಿದ ಯೋಗಿ ಜೀವಿಸಿದಿರಿಲ್ಲಿ ನೀವ್ ಶತಮಾನಪೂರ್ತಿ | ವಿಧವಿಧದ ನುಡಿಗಳಿಗೆ ಅರ್ಥವನು ನಿರವಿಸಿದ ಶಬ್ದಕೋಶದ ಶಿಲ್ಪಿ ನಿಮಗೆ ನುಡಿನಮನ ಅಂಬೆಗಾಲಿಕ್ಕುವರ ಕೈಹಿಡಿದು ನಡೆಸುತ್ತ ಹುರಿದುಂಬಿಸಿದ ನಿಮಗೆ ಸಾವಿರದ ನಮನ | ಅಪ್ಪಯ್ಯನೊಡನಾಟ ನೆನೆಸಿಕೊಳ್ಳುತಲಂದು ತೀರ್ಥರೂಪರ ತೆರದಿ ಹರಸಿದಿರಿ ನನ್ನ ಅಪ್ರಬುದ್ಧಳ ಕರೆದು ನುಡಿಸೇಸೆಯನ್ನಿಟ್ಟ ಗುರುಚರಣದಲ್ಲಿಡುವೆ ನನ್ನ ಶಿರವನ್ನ | ಸರಸತಿಯ ವರಪುತ್ರ ನಿಮ್ಮಾತ್ಮಶ್ರೀ ಇಂದು ಭವಬಂಧನವ ಕಳಚಿ ಸಾಯುಜ್ಯಗೊಳಲಿ ನೀವು ಸಾಗಿದ ದಾರಿ ಮುಂದಿರುವ ಪೀಳಿಗೆಗೆ ಎಡವದೆಯೆ ನಡೆಯಲಿಕೆ ದೀಪವಾಗಿರಲಿ || - ಇಂದಿರಾಜಾನಕಿ.

ಸಹೃದಯಜೀವಿ...
bottom of page