top of page

ಸಮಾಗಮ

ಶರಧಿಯ ಅಬ್ಬರಕೆ ನದಿ ಬೆಚ್ಚುವುದಿಲ್ಲ ಶಾಂತನಾಗುತ್ತಾನೆ ಸಮುದ್ರ ರಾಜ ನದಿಗಳ ಮಹಾ‌ ಮಿಲನಕೆ ಅಬ್ಬರಿಸಿ ಬೊಬ್ಬಿರಿಯುತ್ತವೆ ಜೊತೆಯಾಗಿ ಆಮೋದ ಪ್ರಮೋದಕೆ| ಪತಿಯ ರುದ್ರ ಕೋಪಕೆ ಅಂಜುವುದಿಲ್ಲ ಪತ್ನಿ ಮತ್ತೆ ಮತ್ತೆ ಕರಗುತ್ತಾನೆ ಸುಖವನರಸಿ ಮಡಿಲು ಸೇರುತ್ತಾನೆ ಅವಳ ಪ್ರೇಮಮಯಿ ತಾಯ್ತನಕೆ| ಆಗಾಗ ಮೋಡದ ಮರೆಯಲ್ಲಿ ಅವಿತುಕೊಳ್ಳುವ ಸೂರ್ಯ ದೇವನ ಶಪಿಸುವುದಿಲ್ಲ ಭೂಮ್ತಾಯಿ ಗೊತ್ತು ಅವಳಿಗೂ ಬಂದೇ ಬರುವ ಇಳೆಯ ಮಕ್ಕಳ ನೋಡಲೆಂದು ಧರೆಯ ದಾಹ ತಣಿಸಲೆಂದು|
ಪ್ರಕೃತಿ ಬಿಟ್ಟು ಪುರುಷನುಂಟೆ ಬಿಟ್ಟರೆ ಸಂಸಾರ ಸಾಗುವುದುಂಟೆ ಸರಸ ವಿರಸ ಜಗದ ನಿಯಮ ಎಲ್ಲಕೂ ಉಂಟು ರಾಮಬಾಣ ಪರಸ್ಪರ ಸಮಾಗಮ| ಸುಧಾ ಹಡಿನಬಾಳ

ಸಮಾಗಮ
bottom of page