top of page

ಶಾಂತಿಯ ಚೇತನ

ಶರಾವತಿ ಪಟಗಾರ ಅವರು ತಥಾಗತನಾದ ಬುದ್ದನನ್ನು ಕುರಿತು ಬರೆದ ಎದೆಯ ಕದವನ್ನು ತಟ್ಟುವ ಭಾವಪೂರ್ಣ ಕವನ. ಕೇಂದ್ರ ಕ.ಸಾ.ವೇ ಉ.ಕ.ದಿಂದ ಆಯ್ದುಕೊಂಡು ಪ್ರಕಟಿಸಲಾಗಿದೆ.ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ #ಶಾಂತಿಯ ಚೇತನ# *ಭೋಗ ತೊರೆದು ಬಾಳಿದಂತ|* *ತ್ಯಾಗ ಮೂರ್ತಿ ಬುದ್ಧನೆ||* *ರಾಗ ದ್ವೇಷ ತೋರದಂತ|* *ಯೋಗಿ ಚಂದ್ರ ತೇಜನೆ||೧||* *ಮೊಗದಿ ಮಂದಹಾಸ ತುಂಬಿ|* *ನಗುವ ಅರ್ಥ ತೋರಿದೆ||* *ಜಗಕೆ ಶಾಂತಿ ಮಂತ್ರ ಸಾರಿ|* *ಸೊಗದ ಅರಿವು ನೀಡಿದೆ||೨||* *ಹಿರಿದು ಬಂಡೆ ಮೇಲೆ ಕುಳಿತು|* *ತೊರೆದೆ ಎಲ್ಲ ಚಿಂತೆಯ||* *ತೆರೆದು ಮನದ ಕಣ್ಣನೊಮ್ಮೆ|* *ಎರೆದೆ ಜ್ಞಾನ ಜ್ಯೋತಿಯ||೩||* *ಮೌನಿಯಾಯ್ತು ಕಡಲ ತೆರೆಯು|* *ಧ್ಯಾನಿ ನಿನ್ನ ಎದುರಿಗೆ||* *ಬಾನಿನಲ್ಲಿ ಬೆಳಗೊ ಶಶಿಯು|* *ತಾನು ಹೊಳೆದ ಚೆಲುವಿಗೆ||೪||* *ಸೃಷ್ಟಿಯಂತೆ ನಿನ್ನ ಕಾಂತಿ|* *ಹೃಷ್ಟ ತುಂಬಿ ಮೈಮನ||* *ಎಷ್ಟು ಚೆಂದ ಶಾಂತಿ ಬಾಳು|* *ಇಷ್ಟ ನಿನ್ನ ಜೀವನ||೫||* ✍️ ಶರಾವತಿ ಪಟಗಾರ ಭಟ್ಕಳ ಉ.ಕ.

ಶಾಂತಿಯ ಚೇತನ

©Alochane.com 

bottom of page