top of page

ರಾಧಾಕೃಷ್ಣ
ಪುಟ್ಟ ಮಕ್ಕಳ ನೆಟ್ಟ ನೋಟವು ಹುಟ್ಟು ಹಾಕಿವೆ ಕಾವ್ಯಕೆ ದಿಟ್ಟ ದೃಷ್ಟಿಯು ತಟ್ಟಿತೆದೆಗಿದು ಮುಟ್ಟುವoತಿದೆ ಹೋಲಿಕೆ ಮುದ್ದು ಬಾಲರ ಯೆದ್ದು ತೋರುವ ಶುದ್ಧ ಕಾಂತಿಯು ಮೆರೆಸಿದೆ ನಿದ್ದೆಗಣ್ಣಲು ಸದ್ದು ಮಾಡುವ ಮುದ್ದು ಮೋರೆಯ ಕುಂದದೆ ರಾಧೆರೂಪಕೆ ಮೋದ.ತುoಬುವ ರಾಧ ರಮಣನ ಕಂಡೆನು ಗೋಧಿ ಬಣ್ಣದ ಸಾಧು ಚೆಲುವಿನ ಜಾದುಗಾರನೊ ಕೃಷ್ಣನು 🌺 ನಾಗೇಶ ಅಣವೇಕರ

bottom of page