top of page

ಯೋಗದ ಮಹಿಮೆ

ಆರೋಗ್ಯ ಭಾಗ್ಯ ಯೋಗದಿ ಅಡಗಿದೆ ಜಗವು ಕಂಡ ಸತ್ಯ| ಜಿಂಕೆಯ ಹಾಗೆ ಜಿಗಿಯುತ ನಲಿಯಲು ಮಾಡಿ ಯೋಗ ನಿತ್ಯ|| ಓಂಕಾರ ಮಂತ್ರವ ಪಠಿಸಲು ಮನದಿ ಚಿಂತೆ ಮರೆತು ಶಾಂತಿ| ಪತಂಜಲಿ ಮಹಿಮೆ ಮೆಚ್ಚಿ ನಡೆಯುತ್ತಿದೆ ಜಗದಿ ಯೋಗ ಕ್ರಾಂತಿ|| ವಿಶ್ವಕೆ ಯೋಗದ ಗುಟ್ಟು ಸಾರಿದ ಭರತ ಮಾತೆ ಧನ್ಯ| ನೆಮ್ಮದಿ ಉಸಿರು ನಮ್ಮ ಪಾಲಿಗೆ ಯೋಗ ಕೊಟ್ಟ ಪುಣ್ಯ|| ಸಕಲ ಐಶ್ವರ್ಯಕೂ ಆರೋಗ್ಯ ದೊಡ್ಡದು ಸತ್ಯ ತಿಳಿವ ಇಂದು| ಸದೃಢ ಭಾರತ ಕಟ್ಟಿ ನಲಿಯುವಾ ಯೋಗ ಅರಿತು ಮುಂದು|| -ಸಾತುಗೌಡ ಬಡಗೇರಿ. ಸಾತು ಗೌಡ ಬಡಗೇರಿ ಇವರು ಅಂಕೋಲಾ ತಾಲೂಕಿನ ಬಡಗೇರಿಯವರು.ಸದ್ಯ ಕುಮಟಾ ತಾಲೂಕಿನ ಮಾದನಗೇರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.ಕವನ,ಚುಟಕ ರಚನೆ,ನಾಟಕದಲ್ಲಿ ಅಭಿನಯ,ಚಿತ್ರಕಲೆ ಇವರ ಹವ್ಯಾಸಗಳಾಗಿವೆ ಪದ್ಮಶ್ರೀ ನಾಡೋಜ ಸುಕ್ರಿ ಬೊಮ್ಮ ಗೌಡ ಅವರ ಕೇರಿಯವರು ಇವರು. ಸಂಪಾದಕ.

ಯೋಗದ ಮಹಿಮೆ
bottom of page