top of page

ಮ್ಯಾಜಿಕ್ ಬಾಬಾನಿಗೆ ಮುತ್ತು

ಮ್ಯಾಜಿಕ್ ಲೋಕಕೆ ಹೇಗೊ ಏನೊ ಮ್ಯಾಜಿಕ್ ಆಗಿಯೇ ಬಿದ್ದೆ ಮ್ಯಾಜಿಕ್ ಬಾಬಾನ ಜೋಳಿಗೆ ಒಳಗೆ ನಿದ್ದೆ ಮಾಡಿ ಎದ್ದೆ ಮ್ಯಾಜಿಕ್ ಅಂದರೆ ಮ್ಯಾಜಿಕಪ್ಪ ಎಷ್ಟು ಸಣ್ಣ ನಾನು ಮ್ಯಾಜಿಕ್ ಬಾಬನ ಗೊಂಬೆ ಹಾಗೆ ಆದೆನು ಒಂದು ಗೇಣು ಮ್ಯಾಜಿಕ್ ಬಾಬಾ ಹೊರಟಿದ್ದೆಲ್ಲಿಗೆ ಗಡ್ಡ ನೀವುತ ಈಗ ರಸ್ತೆ ಬದಿಯಲಿ ಕುಳಿತೇ ಬಿಟ್ಟ ಅಲ್ಲೇ ಅವನ ಜಾಗ ಕಣ್ಣ ತಿರುಗಿಸಿ ಝುಂಮಂ ಎಂದು ಕಾಗೆಯ ಕರೆದೇ ಬಿಟ್ಟ ಕಾಗೆಯ ಹಿಡಿದು ಕಣ್ಣನು ಮುಚ್ಚಿ ಮೇಲಕೆ ನನ್ನನು ಇಟ್ಟ ಕಾಗೆಯ ರೆಕ್ಕೆ ಬೆಳೆಯಿತು ಹೇಗೆ ಉದ್ದ ಉದ್ದ ಉದ್ದ ರೆಕ್ಕೆಯ ಮೇಲೆ ನಾಕುಳಿತಿದ್ದೆ ಮಾಡದೆ ಏನೂ ಸದ್ದ ಮೋಡವ ಚದುರಿಸಿ ಕಾಗೆಯ ರೆಕ್ಕೆ ಚಂದಕೆ ಹಾರುತಲಿತ್ತು ಎಲ್ಲೆಡೆ ಮೋಡ ರಾಶಿ ರಾಶಿ ತುಂಬಾ ದಿಗಿಲಾಗಿತ್ತು ಸೂರ್ಯ ಚಂದ್ರ ತಲುಪಿಸ ಬೇಕಾ ಹಿಡಿಯೋಣವೆ ನಕ್ಷತ್ರ ಎನ್ನುತ ಕಾಗೆ ಹೊರಟಿತು ದೂರ ಬಾನಿನ ತುಂಬಾ ಚಿತ್ರ ಎಲ್ಲೋ ಸುತ್ತಿ ಎಲ್ಲೋ ಸಾಗಿ ಬಂದಿತು ತೋಟಕೆ ಕಾಗೆ ಮರದಲ್ಲೆಲ್ಲಾ ಹಣ್ಣೇ ಹಣ್ಣು ಮಕ್ಕಳೇ ಇಲ್ಲದ ಜಾಗೆ ಕೊಯ್ಯುವರಿಲ್ಲ ತಿನ್ನುವರಿಲ್ಲ ಕೊಳೆತಿದೆ ಹಣ್ಣಿನ ರಾಶಿ ಒಬ್ಬನೆ ಒಬ್ಬನು ಗೆಳೆಯನು ಇದ್ದರು ಆಗುವುದೆಷ್ಟು ಖುಶಿ ಬುಟ್ಟಿಯ ತುಂಬಾ ಹಣ್ಣನು ತುಂಬಿ ಹಾರಲು ಹೊರಟಿತು ಕಾಗೆ ಅಯ್ಯೋ ನನ್ನ ಬಿಡಬೇಡಪ್ಪ ಗೆಳೆಯರೇ ಇಲ್ಲದ ಜಾಗೆ ಬುಟ್ಟಿಯ ಒಳಗೇ ಹಾಕಿತು ನನ್ನ ಬಂದಿತು ಬಾಬನ ಬಳಿಗೆ ಗಾಳಿಯ ಹೊಡೆತಕೆ ಸಿಕ್ಕಿದ ನಾನು ನಡುಗುತಲಿದ್ದೆ ಚಳಿಗೆ ಮತ್ತೆ ಹೊರಟಿತು ಝುಂಮಂ ಮಂತ್ರ ಕಪ್ಪಲಿ ಚಹವನು ಕುಡಿದ ತಿರುಗಿಸಿ ತಿರುಗಿಸಿ ಏನೋಮಾಡಿದ ಬಿಸಿ ಬಿಸಿ ಹಾಲನು ಹಿಡಿದ ಹಾಲನು ಕುಡಿದು ಅಮ್ಮನ ನೆನಪಲಿ ಮನೆಕಡೆ ಹೊರಟೆನು ಆಗ ಕೈಯನು ಚಾಚಿ ಪಟ್ಟನೆ ಹಿಡಿದ ಸೇರಿದೆ ಜೋಳಿಗೆ ಈಗ ಜೋಳಿಗೆ ಸಂದಲಿ ಇಣುಕಿದೆ ನಾನು ಮನೆಕಡೆ ಹೋಗುವ ಆಸೆ ಮೇಲಕೆ ನೋಡಲು ಹಾವಿನ ಹಾಗೇ ಕಾಣುತಲಿತ್ತು ಮೀಸೆ ಜೋಳಿಗೆ ಸರಿಸಿ ಪಕ್ಕನೆ ಜಿಗಿದು ತಪ್ಪಿಸಿ ಕೊಳ್ಳುವ ಚಿಂತೆ ಹ್ಹ... ಹ್ಹ... ಎಂದು ನಕ್ಕನು ಬಾಬಾ ಹೆದರಿ ನಡುಗಿ ಕುಂತೆ ಬಾಯನು ತೆರೆದು ಮೂಗನು ಅರಳಿಸಿ ಬಾಬಾ ಬಗ್ಗಿದ ಕೆಳಗೆ ಅಯ್ಯೋ ಈಗ ಸತ್ತೆನು ನಾನು ಎನ್ನುತ ಹೆದರಿದೆ ಒಳಗೆ ಕೈಯಲಿ ಹಿಡಿದು ಮೇಲಕೆ ಎತ್ತಿದ ಕಣ್ಣದು ಫಳಗುಡುತಿತ್ತು ಏನೇ ಆಗಲಿ ಎನ್ನುತ ನಾನು ಕೊಟ್ಟೆನು ಅವನಿಗೆ ಮುತ್ತು ಮೀಸೆ ಮೂಗು ಎಲ್ಲಾ ನಕ್ಕಿತು ನೆತ್ತಿಯ ಸವರಿ ಇಟ್ಟ ಮೊದಲಿನ ಹಾಗೇ ಮಾಡಿದ ನನ್ನ ಮನೆಗೆ ಹೋಗಲು ಬಿಟ್ಟ. -ತಮ್ಮಣ್ಣ ಬೀಗಾರ.

ಮ್ಯಾಜಿಕ್ ಬಾಬಾನಿಗೆ ಮುತ್ತು
bottom of page