top of page

ಮೊದಲದಿನ

ಹೊರಗೆ ಪೆಡ್ಡೆ ಹುಡುಗರ ಗದ್ದಲ, ಚೇಷ್ಟೆಯ ಮಾತು ಪಿಸುಪಿಸು ಒಡನೆ ನಗು ಕೇಕೆ ಚಂದ್ರ ಇಳಿಯುತ್ತಾ ನೆ ಭೂಮಿ ಗಿಂದು ಕಿಡಕಿಯಲ್ಲೆಲಗಿ ನೋಡಲೆಂದೆ? ಮತ್ತೊಬ್ಬನ ಪ್ರಸ್ನೆ ಇಲ್ಲಪ್ಪ ಮಂಚಮುರಿದೀತೆಂಬ ಭಯ ಭಾರಕ್ಕೆ ಅಲ್ಲಲ್ಲ ಸೂರ್ಯ ಹೋದದ್ದೆ ಲ್ಲಿಗೆಂದು ಹುಡುಕಾಟ ಆಡಿದ್ದೆ ಮಾತು: ಎಲ್ಲೆಲ್ಲಿಯೋಹಗ್ಗ ಜಗ್ಗಿ ‌ಜೋಲಿಯಾಡಿದಂತೆ ಏನುಗದ್ದಲವಲ್ಲಿ. ? ಇತ್ತಬನ್ನಿ ಹಿರಿಯಣ್ಣನ ಹುಸಿ ಸಿಡುಕಿನ ದ್ವನಿ ಇಲ್ಲ ಚಿಕ್ಕಪ್ಪ, ಇಂದು ಅರಳಿದ ಹೂವು ಜಾಜಿಯೋ ಮಲ್ಲಿಗೆಯೋ ನೀವೆಹೇಳಿ ಬಾಗಿಲಲಿ ಸದ್ದು ಸಣ್ಣಗೆ ತಾಯಿಬಂದಳು ಒಳಗೆ ಕೈಯಲ್ಲಿ ಕೆನೆಹಾಲು ಕೇಸರಿಯ ಗಮಲು ಬಿರಿದ ತುಟಿ. ಮಾಡದಿರು ಗದ್ದಲವ ಸುಮ್ಮನಿರು,. ಮೊದಲೆಲ್ಲ ಹೀಗೆಯೇ ಕಿವಿಗೆ ತಂಪೆರೆದು ಕೈಯಲಿಟ್ಟಳು ಬಟ್ಟಲವ ಸದ್ದಾಗದಂತೆ ಎಳೆದು ಕೊಂಡಳು ಕದವ ಅವ್ವನೆಂದಂತೆ ಸುಮ್ಮನಿದ್ದೆನು ನಾನು ಇಂದಿ ದೋ ತೂಗುತಿವೆ ತೊಟ್ಟಿ ಲೆರಡು ಗಜಾನನ ಈಶ್ವರ ಹೆಗಡೆ

ಮೊದಲದಿನ
bottom of page