top of page
ಮೈ ಮಾರುವವಳು
ಹಿಚುಕಿದಷ್ಟು ಸಹನೆಯಲ್ಲಿಯೇ ಸುಖವ ನೀಡಿ ದುಃಖದಲ್ಲಿಯೇ ಕರಗಿ ಕರಗಿ ಅರಗು ಬತ್ತಿಯಂತೆ ಅರೆಕಾಸಿನ ಹೊಟ್ಟೆ ಯ ಹಿಟ್ಟಿಗಾಗಿ ಉಳ್ಳವರ ತೀಟೆ ತೀರಿಸಿ ಉದರದಲ್ಲಿ ಪಿಂಡವ ಪ್ರತಿಷ್ಟಾಪಿಸಿ ಮಜವ ನೋಡುವ ಮಂದಿಯ ಚೇಷ್ಟೆಯನ್ನೆಲ್ಲಾ ನುಂಗಿಕೊಂಡು ಸೂಳೆ ವೇಶ್ಯೆ ಯೆಂಬ ಉಪನಾಮದ ಹಣೆ ಪಟ್ಟಿ ಹೊತ್ತಿರುವವಳು ನಾನು ಮೈ ಮಾರುವವಳು. . ಅನಿಲ ಕಾಮತ ಗೋಕರ್ಣ ಅನಿಲ ಕಾಮತ ಗೋಕರ್ಣ ಅವರು ಜೀವನ ಪ್ರೀತಿಗೆ ಇನ್ನೊಂದು ಹೆಸರು. ಚಿತ್ರ ಕಲಾವಿದರಾಗಿ ನಾಡಿನಾದ್ಯಂತ ಚಿರ ಪರಿಚಿತರಾದ ಅನಿಲ ಕಾಮತ ಬಹಳಷ್ಟು ಜನ ಸಾಹಿತಿಗಳ ಚಿತ್ರವನ್ನು ಚಿತ್ತಾಕರ್ಷಕವಾಗಿ ಚಿತ್ರಿಸಿದ್ದಾರೆ. ಅವರ ವ್ಯಂಗ್ಯ ಚಿತ್ರಕಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು ಅವು ಸಮಕಾಲೀನ ಪರಿಸ್ಥಿಗೆ ಭಾಷ್ಯ ಬರೆಯುವಂತೆ ಇರುತ್ತವೆ. ಅಸಹಾಯಕಳಾಗಿ ಮೈ ಮಾರುವ ದುರಂತಕ್ಕೆ ತನ್ನನ್ನು ಒಡ್ಡಿಕೊಳ್ಳುವ ಬಗೆಯನ್ನು ಈ ಕವನದಲ್ಲಿ ನಿರೂಪಿಸಿದ್ದಾರೆ. ಬಹುಮುಖ ಪ್ರತಿಭೆಯ ಅನಿಲ ಕಾಮತ ಅವರ ಕವನ ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
bottom of page