top of page
ಮುನಿದ ಮುಂಗಾರು
ರಣಮಳೆ ಸುರಿಯಲು ಇಳೆ ಮಡಿಲಲ್ಲಿ ಜನತೆಯ ಬದುಕಲಿ ಚೆಲ್ಲಾಟ. ಮನೆಮಠ ಮುಳುಗಿಸಿ ವಿಕೃತಿ ಮೆರೆಯಲು ನಿತ್ಯವೂ ಬಾಳಲಿ ಗೋಳಾಟ. ತುಂಬಲು ಜಲವು ಭೂವಿ ಒಡಲಲ್ಲಿ ಸಾಗರವಾಗಿದೆ ಧರೆ ತುಂಬೆಲ್ಲಾ. ಕೊಚ್ಚಿ ಹೋಗಲು ಜೀವಜಗ ಮುಳುಗುತ ಕಣ್ಣೀರು ಸುರಿಸಿದೆ ಜಗವೆಲ್ಲಾ. ರೈತರ ಮೊಗದಲಿ ಕಂಬನಿ ಮಿಡಿದಿದೆ ಕೊಳೆತಿಹ ಬೆಳೆಯ ನೋಡುತಲಿ.. ಕಟ್ಟಿದ ಕನಸದು ನುಚ್ಚು ನೂರಾಗಿದೆ ನಾಳಿನ ದಿನಗಳ ಚಿಂತೆಯಲಿ. ನಲುಗಿದೆ ಕರುನಾಡು ಅತಿವೃಷ್ಟಿಗೆ ಸಿಲುಕಿ ಗೋಳಾಗಿದೆ ನಾಡಿನ ಕಥೆಯಿಂದು.. ಸೂತಕ ಛಾಯೆ ಮುಸುಕಿದೆ ಎಲ್ಲೆಡೆ ಶರಣೆಂದಿದೆ ವರುಣಗೆ ಜನನೊಂದು. ಮುಂಗಾರು ಮಳೆಯ ರಭಸಕೆ ಉರುಳಿವೆ ರಸ್ತೆ,ಕಟ್ಟಡ ಮನೆಮಠವೆಲ್ಲಾ.. ಸಮಾದಿ ಆಗಿದೆ ಜೀವ ಜಗ ಜಲದಿ ಸಾವು ನೋವಿಗೆ ಲೆಕ್ಕಿಲ್ಲಾ. ಸಾಕು ಮಾಡು ವರುಣ ದೇವನೇ ನಿನ್ನಯ ಪ್ರಕೋಪವ ಇಲ್ಲಿಗೆ.. ನಲಿಯಲಿ ಮುಂದೆ ಜೀವಜಗ ಧರೆಯಲಿ ಮಳೆಹನಿ ಸುರಿಸು ಮೆಲ್ಲಗೆ. ಸಾತುಗೌಡ ಬಡಗೇರಿ.ಅಂಕೋಲಾ ಕವಿ ಸಾತು ಗೌಡ ಬಡಗೇರಿಯವರು ಬರೆ 'ಮುನಿದ ಮುಂಗಾರು' ಎಂಬ ಕವನ ನಿಮ್ಮ ಓದಿಗಾಗಿ. ಸಂಪಾದಕ ಆಲೋಚನೆ.ಕಾಂ
bottom of page