top of page

ಮುದಜ್ಜಿಗೊಂದು ಪಾಠ

ರಂಗನ‌ ಮನೆಯಲಿ ತಿಂಗಳ ಕೊನೆಯಲಿ ಮಂಗಳ ಕಾರ್ಯವು ಜರುಗಿತ್ತು ರಂಗಿನ ಬಣ್ಣದ ಶೃಂಗರ ನೋಡಲು ಕಂಗಳೆ ಮಿಟುಕದೆ ನಿಂತಿತ್ತು// ಹೆಂಗೆಳೆಯರೆಲ್ಲ ಅಂಗಳ ಮುಂದಣ ರಂಗೋಲಿಯ ಬಿಡಿಸಿದರಂದ ಸಂಗಡಿಗರೆಲ್ಲ ಸಿಂಗರಿಸಿದ ಮನೆ ಕಂಗೊಳಿಸಿತು ಬಲು ಸೊಗದಿಂದ// ನೆಂಟರು ಇಷ್ಟರು ತುಂಟರ ಬಳಗವು ಪಂಟರು ನೆರೆದರು ಸಂಭ್ರಮದಿ ತುಂಟರ ನಾಯಕ ಪಿಂಟುವು ಸಿದ್ಧನು ಗಂಟನು ಪಡೆಯುವ ಕಾಯಕದಿ// ಮುದಿವಯಸಿದ್ದರು ಕದಿಯುವ ಬುದ್ದಿಯ ಮುದಜ್ಜಿ ಬಂದಳು ಸಂಭ್ರಮಕೆ ಅಂದದ ರತ್ನದ ಸುಂದರ ಪುತ್ಥಳಿ ಯೊಂದನು ಕದ್ದಳು ಆಮಿಷಕೆ// ಒಡನೆಯೆ ದೂರದಿ ನೋಡಿದ ಪಿಂಟುವು ಪಡೆಯಲು ಪುತ್ಥಳಿ ನಿರ್ಧರಿಸಿ ತಡವನು ಮಾಡದೆ ಮಡುಗಿದ ತಿಳಿಯದೆ ಪಡೆದನು ಮುದಜ್ಜಿ ಮರೆಗೊಳಿಸಿ// ಪೂಜಾರಿ ಕೇಳೆ ಪೂಜೆಗೆ ಪುತ್ಥಳಿ ಗೋಜಾಯಿತೆಲ್ಲು ಕಾಣದಿರೆ ಮೋಜಲೆ ‌ಪಿಂಟುವು ರಾಜಾ‌ರೋಷದಿ ಪೂಜೆಯ ಪುತ್ಥಳಿ ತೋರುತಿರೆ// ಇಂಗನು ತಿಂದಿಹ ಮಂಗನ ಹಾಗೆಯೆ ಪೆಂಗನೆ ನಿಂದಳು ಮುದಜ್ಜಿಯು ರಂಗನ ಮನೆಯಲಿ ಮಂಗಳ ಕಾರ್ಯದಿ ಅಂಗನೆ ಕಲಿತಳು ಸುಬುದ್ಧಿಯ// ಭವಾನಿ ಗೌಡ(ಭುವಿ) ವಿಜಯಪುರ

ಮುದಜ್ಜಿಗೊಂದು ಪಾಠ
bottom of page