top of page

ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ ಹೇಳು ಇನ್ನೊಂದೇ ಬಾರಿ-- ಅಮ್ಮಾs ಅನ್ನು,ಅಪ್ಪಾs ಅಂದು ಬಿಡು! ಕಳ್ಳಾ,ಕಳ್ಳಿ! ನಿನ್ನ ನಲ್ಲಿಗೆ ನಾವೇ ಕೊಡಪಾನ! ತುರ್ತಾಗಿ ಬೇಕಿತ್ತು, ಖಾಲಿ ಮಾಡಲಿಕ್ಕೆ!, ಒಂದು ಸಲ ಹೇಳಿಬಿಡು: "ಅಜ್ಜಾ,ಅಜ್ಜಿ' ಅಂತ! ಕಿಸೆ ತುಂಬಾ ಮಾವಿನ ಹಣ್ಣು ಕೊಡುವೆ" ಎಷ್ಟಿತ್ತು ಜುಲುಮೆ. ಈಗ ಯಾರಿಗೂ ಮಾತೇ ಬೇಡ! ಆಡಿದರೆ, 'ವಾಚಾಳಿ' ಆಡದಿದ್ದರೆ "ಮೂಕಜಾಣ" ಬಿರುದು!-- --ಕೇಳಿ,ತಿಳಿದ ಅಷ್ಟೋ ಇಷ್ಟು ಮಾತೂ ಬತ್ತಿ ಹೋಗಿದೆ. ಅಬ್ಬಾ! ಇಲ್ಲಿ ಮಾತು ಆಡಿದರೂ ಕಷ್ಟ, ಆಡದಿದ್ದರಿನ್ನೂ ಕಷ್ಟ, ಎಂದು ಅರಿವಾಗಿದೆ, ಅದಕೇ, ಯಾರು ಕೇಳಲಿ ಬಿಡಲಿ, ಅಗತ್ಯ ಬಿದ್ದಾಗ ಆಡದಿರೆನು. ಗಣಪತಿ ಗೌಡ,ಹೊನ್ನಳ್ಳಿ

ಮಾತನಾಡುವ ಕಷ್ಟ!
bottom of page