
ಮಹಾಮಾಯೆ ಮೊಬೈಲ್ಲು
ಹೆ ಮೊಬೈಲ್ಲು ನೀ ಈಗ ಎಲ್ಲೆಲ್ಲೂ.. ಸಾಮನ್ಯನಿಂದ ಹಿಡಿದು ಸ್ವಾಮಿಗಳ ಕರದಲೆಲ್ಲು ನೀನೊಂದು ಇಷ್ಟಲಿಂಗ. ಕಣ್ಣು ಬಿಟ್ಟಂತೆ ಬಿಟ್ಟ ತ್ರಾಟಕ ಯೋಗದ ಪರಿ ನಿನ್ನೊಳಗೆ ತದೇಕ ಚಿತ್ತ. ಬಂಧು-ಬಾಂಧವರು, ಗುರು ಹಿರಿಯರು ಮುಂದಿದ್ದರೂ ಹಂಗು ಹರಿದು... ನಿನ್ನೋಳಗಿನ ವಾಟ್ಸಪ್,ಫೇಸ್ಬುಕ್, ಟೆಲಿಗ್ರಾಂ ಗೂಗಲ್ ಫೇಸ್ಬುಕ್ ಒಂದಾದ ನಂತರ ಇನ್ನೊಂದರಲ್ಲಿ ತವಕ ತಲ್ಲಣ ತಲ್ಲಿನತೆಯ ದಾಹ ಹಿಂಗದ ನೋಟ..!! ನಿನ್ನ ಹಿಡಿತದಿ, ಮಾತು,ಆಲಿಕೆ, ನೋಟ ಹೆಚ್ಚಾಗಿ ಪುಸ್ತಕ-ಮಸ್ತಕದ ಸ್ವಯಂ ವಿಚಾರವಿಲ್ಲ ನಿರ್ವಿಲ್ಲ ಕಡ್ಡಾಯ. ಕೊನೆಗೆ ಸಂಬಂಧಗಳೆಲ್ಲ ಕಳಚಿ ಒಬ್ಬಂಟಿಯ ಲೈಫು ಸೀಮಿತ.! ಕ್ರತ ತ್ರೇತ ದ್ವಾಪರದಲಿ ಹೆಣ್ಣು ಹೊನ್ನು ಮಣ್ಣು ಮಾಯೆಯೆಂಬರು, ಇವೆಲ್ಲಕ್ಕೂ ತುಸು ಮಿಗಿಲು ಈ ಕಲಿಯುಗದಿ. ಸತಿ-ಪತಿಯರ ಸು-ಸಂಗ ನಿನ್ನ ಮನಮಗ್ನದಿ ಭಂಗ ಎಳೆಯರಿಂದ-ಇಳಿವಯದವರ ಬಡವರಿಂದ-ಬಲ್ಲಿದರೆಲ್ಲರ ಅಂಗೈಯ ಮೋಹದರಗಿಣಿ ನೀನಲ್ಲವೆ.? ಮಹಾಮಾಯೆ ಮೊಬೈಲು ಸೋಮನಾಥ.ಡಿ. . ಸೋಮನಾಥ ಡಿ.ಅವರು ನಿರಂತರ ಜೀವನೋತ್ಸಹದ ಎಲ್ಲರ ನಲ್ಮೆಯ ವ್ಯಕ್ತಿ. ಅವರ ಅಗಾಧವಾದ ಜೀವನ ಪ್ರೀತಿಗೆ ಎಲ್ಲರು ಶರಣೆನ್ನ ಬೇಕು. ಹಾವೇರಿಯ ಕರ್ಜಗಿಯ ಮೊರಾರ್ಜಿ ಅಲ್ಪ ಸಂಖ್ಯಾತರ ಪಿ.ಯು.ಕಾಲೇಜಿನ ಪ್ರಿನ್ಸಿಪಾಲರಾಗಿರುವ ಸೋಮನಾಥ ಅವರು ಮೊಬೈಲ್ ಬಗ್ಗೆ ಕರೆದ ಕವನ ನಿಮ್ಮ ಓದು ಮತ್ತು ಸಹ ಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
