top of page

ಮಹಾಭಾರತ ಹನಿಗವನಗಳು

ಸಾಟಿ ***** ಬರಿ ಐವರಿದ್ದರೇನು ಪಾಂಡವರು ನೂರಿದ್ದೂ ಸಾಟಿಯಾಗಲಿಲ್ಲ ಕೌರವರು! ಕರ್ಣ ***** ವೈರಿಯಾದರೂ ಪಾಂಡವರಿಗೆ ಕರ್ಣ ಅದೇ ಬಳ್ಳಿಯ ಪರ್ಣ! ಮಹಾಭಾರತ ************ ಪ್ರಾರಂಭ ಪಗಡೆಯಾಟ ಮುಕ್ತಾಯ ಹೊಡೆದಾಟ! ಮರಣ ಶಾಸನ ************** ದ್ರೌಪದಿಯ ಮುಡಿ ಹಿಡಿದು ಸಭೆಗೆ ಎಳೆದು ತಂದಾಗಲೇ ದುಶ್ಯಾಸನ ಬರೆದುಕೊಂಡ ತನ್ನ ಬದುಕಿಗೆ ಮರಣ ಶಾಸನ! ಕಲಿವುದೇನು? ************ ಮಹಾಭಾರತದಿಂದ ಕೊನೆಗೂ ಕಲಿವುದೇನು ಮನುಜ? ತುಂಡು ನೆಲಕ್ಕಾಗಿ ಬಡಿದಾಡಿದರೆ ಬಂಧುಗಳನ್ನೆಲ್ಲ ಕಳೆದುಕೊಳ್ಳುವ ನಿಜ ವೆಂಕಟೇಶ ಬೈಲೂರು ಸೃಜನಶೀಲ ಕವಿ ವೆಂಕಟೇಶ ಬೈಲೂರ ಅವರು ಮಹಾಭಾರತದ ಕುರಿತು ಬರೆದಿರುವ ಹನಿಗವನಗಳು ನಿಮ್ಮ ಓದಿಗಾಗಿ ಡಾ.ಶ್ರೀಪಾದ ಶೆಟ್ಟಿ‌ ಸಂಪಾದಕ ಆಲೋಚನೆ.ಕಾಂ

ಮಹಾಭಾರತ ಹನಿಗವನಗಳು
bottom of page