top of page

ಮನೆಮದ್ದಿನಲ್ಲಿ ಅಂತರಗಂಗೆ

ಅಂತರಗಂಗೆ
Salinia spp
salviniacea
ಸಂ..ಶುಂಭಿಕ
ಹಿಂ..ಜಲ್ ಶುಂಭಿ


ಪರಿಚಯ 
ಮಲೆನಾಡಿನ/ ಕರಾವಳಿ ಪ್ರದೇಶಗಳ ನೀರಿರುವ ಕೆರೆಗಳಲ್ಲಿ ತೇಲಾಡುತ್ತ ಹರಡಿಕೊಂಡು ಬೆಳೆಯುತ್ತದೆ.ಬುಡದಲ್ಲಿ ಕಂದುಬಣ್ಣದ ಬೇರು ಒಂದಕ್ಕೊಂದು ಬೆಸೆದುಕೊಂಡಿರುತ್ತದೆ 
   ಉಪಯೋಗ  ಎಲೆ
ಯಾವ ಕಾಯಿಲೆಗೆ..??
೧.ಸಣ್ಣ ಮಕ್ಕಳ ಕೋವೆ
೨ ಒಣಕೆಮ್ಮು
೩.ಸಂಧಿವಾತ 
೪.ಸಣ್ಣ ಮಕ್ಕಳಲ್ಲಿ ಕಾಡುವ ( ೫ವರ್ಶ) ಒಳಗಿನ ಮಕ್ಕಳಲ್ಲಿ ಕಾಣುವ ಅಪಸ್ಮಾರ

ನೀವು ನೋಡಿರಬಹುದಾದ ಗಿಡ ಇರಬಹುದು ಆದರೆ ಲಕ್ಷವಹಿಸಿರಲಿಕ್ಕಿಲ್ಲ  
ವಿಶೇಷವಾಗಿ ಬಳಕೆ ಮಾಡದ ಕೆರೆಗಳಮೇಲೆ ನೀರು ಕಾಣದಾಂತೆ ಒಂದಕ್ಕೆರಡಾಗಿ ಬೆಳೆಯುತ್ತದೆ.


೧.ಸಣ್ಣಮಕ್ಕಳ ಕೋವೆಗೆ ನೀವು ಮಾಡ್ಬೇಕಾದದ್ದು ಇಷ್ಟೆ ಮೊದಲು ಅಂತರಗಂಗೆ ಎಲೆತನ್ನಿ ಇದನ್ನು (ಮಣ್ಣಿನ) ಹಂಚಿನ  ಮೇಲೆ ಹಾಕಿ ಹುರಿದು ಅರ್ಧ ಚಮಚ ಪುಡಿಯನ್ನು ಒಂದು ಚಮಚ ಜೇನುತುಪ್ಪ ಅಥವಾ ಮಿಸರಿ ತುಪ್ಪದೊಂದಿಗೆ ಬೆರೆಸಿ ನೆಕ್ಕಿಸಿ ಕುಡಿಸುವುದಲ್ಲ ದಿನಕ್ಕೆ ಮೂರುಸಲದಂತೆ ೫ ದಿನ ಮಾಡಿ ಸಾಕು ಕಫವು ಕರಗಿ ವಾಂತಿಮೂಲಕ ಹೊರಬೀಳುತ್ತದೆ.


೨.ಸಣ್ಣಮಕ್ಕಳಲ್ಲಿ ಕಾಣುವ ಅಪಸ್ಮಾರ
ಇದು ಸುಮಾರು ೫/೬ ವರ್ಷ ಮಕ್ಕಳವರೆಗೆ ಪರಿಣಾಮಕಾರಿ ಔಷಧ.
ರೋಗದ ಲಕ್ಷಣ ಕಣ್ಣುಗುಡ್ಡೆ  ತಿರುಗಿಸುವುದು ವಿಪರೀತ ಅಳು ಕೈ ಕಾಲು ತಣ್ಣಗಾಗುವುದು ಎಚ್ಚರ ತಪ್ಪುವುದು
ಇದಕ್ಕೆ ಪರಿಹಾರವಾಗಿ ನೀವು ಅಂತಗಂಗೆ ಎಲೆಯನ್ನು ತಂದು ಜಜ್ಜಿ ಬಟ್ಟೆಯಲ್ಲಿ ಗಂಟು ಕಟ್ಟಿ ಇದನ್ನು ರೋಗಿಯ ಮೂಗಿಗೆ ಹಿಡಿಯಿರಿ ಈ ಔಷಧೀಯ ಗಾಳಿ ಉಸಿರಾಟದ ಮೂಲಕ ರೋಗಿಯನ್ನು ಮಾಮೂಲಿ ಸ್ಥಿತಿಗೆ ತರುತ್ತದೆ


೩.ಒಣಕೆಮ್ಮು 
ಒಣಕೆಮ್ಮು ಆಗುವುದು ಸಾಮಾನ್ಯವಾಗಿ ದೇಹದ ಉಷ್ಣತೆ ( ಗರ್ಮಿ) ಯಿಂದ ೧೦ ವರ್ಷ ಒಳಗಿನವರಿಗೆ ಅರ್ಧ ಚಮಚ ದೊಡ್ಡವರಿಗೆ ೧ ಚಮಚ ಪ್ರಮಾಣದಲ್ಲಿ
ಅಂತರಗಂಗೆ ಎಲೆತಂದು ಹಂಚಿನ ಮೇಲೆ ಹುರಿದು ಜೇನುತುಪ್ಪ ದಲ್ಲಿ ಮಸೆದು ನೆಕ್ಕಿಸಿ ಹೀಗೆ ದಿನಕ್ಕೆರಡುಸಲದಂತೆ ೧ ವಾರ ಮಾಡಿ.


೪.ಸಂಧಿ ನೋವು
ಲಕ್ಷಣಗಳು ಸಂಧಿ ಸಂಧಿಗಳಲ್ಲಿ ನೋವು , ಪಾದದಲ್ಲಿ ಉರಿ,ಹಗಲಿನಲ್ಲಿ ಕಡಿಮೆ ರಾತ್ರಿಯಲ್ಲಿ ಹೆಚ್ಚು ನೋವು ಕುಳಿತರೆ ಏಳಲಿಕ್ಕಾಗದ ನೋವು
ಅಂತರಗಂಗೆ ಎಲೆ ೫/೭ ಎಲೆ ತಂದು ದೇಶೀ ಆಕಳ ಹಾಲಿನಲ್ಲಿ ಅರೆದು ದಿನಕ್ಜೆರಡುಸಲದಂತೆ ೫ ದಿನ ಸೇವಿಸಿ.

ಸೂಚನೆ ..ನಾನು ಇಲ್ಲಿ ಗೊತ್ತಿರುವ ಕೆಲವೊಂದು ಔಷಧ ಬರೆದಿದ್ದೇನೆ ಹಾಗೆ ನೆನಪಾದಲ್ಲಿ ಅಥವಾ ಯಾರೊಂದಿಗಾದರೂ ಚರ್ಚಿಸುವಾಗ ಮತ್ತೂ ಹೆಚ್ಚಿನ ಔಷಧ ಗೊತ್ತದಲ್ಲಿ ಇಲ್ಲಿ ಪುನಃ ಸೇರಿಸುತ್ತೇನೆ ಹಾಗೇ ತಮಗೇನಾದರೂ ತಿಳಿದಲ್ಲಿ ಕಾಮೆಂಟ ಮೂಲಕ ಸೇರಿಸಿ.
-ಪ್ರದೀಪ ಜಿ. ಹೆಗಡೆ ಬರಗದ್ದೆ ಕುಮಟಾ

ಮನೆಮದ್ದಿನಲ್ಲಿ ಅಂತರಗಂಗೆ

©Alochane.com 

bottom of page