top of page

ಬಂಧನ ಬಿಡುಗಡೆಯ ಆಚೀಚೆ...

ತಪ್ಪು ಮಾಡಿದವರು ತಪ್ಪು ಮಾಡದವರು ಇಬ್ಬರೂ ಬಂಧನದಲ್ಲಿದ್ದಾರೆ ಅತಿಯಾದ ಊಟ ಪಡೆದವನು ಮಿತವಾದ ಊಟವೂ ಸಿಗದವನು ಇಬ್ಬರೂ ಬಂಧನದಲ್ಲಿದ್ದಾರೆ ಕಾಲವನ್ನು ತಳ್ಳುವವನು ಮತ್ತೆ ನಾಳೆಯ ಕಾಣಬೇಕೆನ್ನುವವನು ಇಬ್ಬರೂ ಬಂಧನದಲ್ಲಿದ್ದಾರೆ.. ಕೂಡಿಟ್ಟ ಕಾಸಿನಲ್ಲಿ ಮನೆಯ ಖುಷಿಯ ಕಂಡವನು ಮನೆ ಖುಷಿಗಾಗಿ ಕಾಸು ಖರ್ಚು ಮಾಡಿಕೊಂಡವನು ಇಬ್ಬರೂ ಬಂಧನದಲ್ಲಿದ್ದಾರೆ.. ತನ್ನ ಪ್ರಾಣವನ್ನು ತನ್ನವರಿಗಾಗಿ ಇತ್ತೆಯಿಟ್ಟವನು ಪ್ರಾಣ ಉಳಿಸಲು ನಿತ್ಯ ತನ್ನ ಪ್ರಾಣವ ಮರೆತವನು ಇಬ್ಬರೂ ಬಂಧನದಲ್ಲಿದ್ದಾರೆ.. ನೆನಪಾಗುತಿದೆ ಈಗ ಅಣು, ಪರಮಾಣು ಬಾಂಬುಗಳು ದೇವಕಣ, ಮಂಗಳಯಾನ‌ ಇತ್ಯಾದಿಗಳು ನಾಕಕ್ಕೆ ಏಣಿಯಾಕಲು ಹೊರಟೆವು ನಾಕು ಜನರ ಕಾಪಾಡಿಕ್ಕೊಳ್ಳಲಾಗುತ್ತಿಲ್ಲ ಮುನಿಸು ಯಾರದು....? ಎಲ್ಲ ಕಡೆ ಇಬ್ಬರೂ ಬಂಧಿತರು ಅವರು ಉಳ್ಳವರು ಇಲ್ಲದವರು ಆದರೆ ಪ್ರಕೃತಿ ಮನುಷ್ಯನ ಬಂಧಿಸಿಟ್ಟು ಪೂರ್ವವಾಗಿಯೇ ಗುಡುಗು ಮಿಂಚಿನ ದಿಬ್ಬಣದೊಂದಿಗೆ ಮಳೆ ಚಿಮ್ಮಿಸಿ ಹಸಿರು ಹಸಿರಾಗಿ ನಗುತ್ತಿದೆ... ಎಷ್ಟಾದರೂ ಹೇಗಾದರೂ ಮನುಷ್ಯ ಪ್ರಕೃತಿಯ ಮುಂದೆ ಶೂನ್ಯನೆಂಬುದು ಮತ್ತೆ ಶಾಭಿತಾಗಿದೆ..... @ ಮೋಹನ್ ಗೌಡ ಹೆಗ್ರೆ ೦೫-೦೫-೨೦೨೧

ಬಂಧನ ಬಿಡುಗಡೆಯ ಆಚೀಚೆ...

©Alochane.com 

bottom of page