top of page

ಪ್ರೊ. ಕೆ.. ಭೈರವ ಮೂರ್ತಿ

ಮೈಸೂರಿನ ಮಹಾರಾಜ ಸಂಜೆ ಕಾಲೇಜಿನ ಕನ್ನಡ ಪ್ರಾದ್ಯಾಪಕ ಪ್ರೊ. ಕೆ.. ಭೈರವ ಮೂರ್ತಿಮಹಾ ಶಿವರಾತ್ರಿ ಹಬ್ಬದ ದಿನವೇ ಕೈಲಾಸ ವಾಸಿಯಾಗಿದ್ದಾರೆ. ಸರಳ ಸಜ್ಜನಿಕೆಯ ವಿದ್ವಾಂಸರಾಗಿದ್ದ ಪ್ರೊ. ಕೆ. ಭೈರವ ಮೂರ್ತಿ ಮತ್ತು ಅವರ ದಿವಂಗತ ಪತ್ನಿ ವಿಜಯ ಕುಮಾರಿ ಅವರನ್ನು ನಾನು ಮೊದಲ ಬಾರಿ ನೋಡಿದ್ದು 32 ವರ್ಷಗಳ ಹಿಂದೆ ಆರತಿ ದಿನ ಪತ್ರಿಕೆಯ ಕಚೇರಿಯಲ್ಲಿ. ಭಾವಗೀತೆ ತಂಡ ಕಟ್ಟಿಕೊಂಡು ಸಾರ್ವಜನಿಕ ಸಮಾರಂಭಗಳಲ್ಲಿ ಹಾಡಿಕೊಂಡಿದ್ದ ಪಬ್ಲಿಕ್ ಟಿವಿ ರಂಗನಾಥನಿಗೆ ಪತ್ರಿಕಾ ಪಾಠ ಕಲಿಸಿಕೊಟ್ಟ ಪತ್ರಿಕೆ "ಆರತಿ"ದಿನಪತ್ರಿಕೆ. ಮೈಸೂರಿನ ಚಾಮುಂಡಿ ಪುರಂನ 10ನೇಕ್ರಾಸ್ ನಲ್ಲಿದ್ದ ಆರತಿ ಪತ್ರಿಕೆ ಕಾರ್ಯಾಲಯಕ್ಕೆಸಂಪಾದಕ ಬಿ. ಎಸ್.ನಾಗರಾಜ್ ರಾವ್ ಭೇಟಿಯಾಗಲು ಭೈರವ ಮೂರ್ತಿ ದಂಪತಿಗಳು ಆಗಾಗ್ಗೆ ಬರುತ್ತಿದ್ದರು. ನಾನಾಗ ಮೊದಲ ಬಾರಿ ಆರತಿ ಪತ್ರಿಕೆಯಲ್ಲಿ ಪತ್ರಿಕಾ ಪಾಠ ಕಲಿಯುತ್ತಿದ್ದೆ. ನಾಲ್ಕು ಪುಟಗಳ ಡೆಮಿ ಸೈಜಿನ ಆರತಿ ದಿನಪತ್ರಿಕೆ 35ವರ್ಷ ಗಳ ಹಿಂದೇ ಮೈಸೂರು ನಗರದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದ್ದ ಪತ್ರಿಕೆ. ಈ ಪತ್ರಿಕೆ ಯಲ್ಲಿ ಭೈರವ ಮೂರ್ತಿ ಲೇಖನಗಳ ಜೊತೆಗೆ ಶ್ರೀಮತಿ ವಿಜಯ ಕುಮಾರಿ ಅವರ ದೈನಂದಿನ ಧಾರಾವಾಹಿ ಪ್ರಕಟವಾಗುತ್ತಿತು. ಭೈರವ ಮೂರ್ತಿ ಹೆಸರಿಗೆ ತಕ್ಕಂತೆ ಇದ್ದರು. ಪತ್ನಿ ವಿಜಯ ಕುಮಾರಿ ಹಾಲು ಬಿಳುಪಿನ ಸೌಂದರ್ಯವತಿಯಾಗಿದ್ದರು. ಬಹಳ ವರ್ಷಗಳ ಹಿಂದೆಯೇ ವಿಜಯ ಕುಮಾರಿ ಅವರು ನಿಧನರಾಗಿದ್ದರು. ಕೆಲ ದಶಕಗಳ ಪತ್ನಿ ಅಗಲಿಕೆ ನಂತರ ಭೈರವಮೂರ್ತಿ ನಿಧನರಾಗಿದ್ದಾರೆ. ಇವರ ದಿವ್ಯ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಸಂಬಂಧಿತರಿಗೆ ದುಃಖ ಸಹಿಸುವ ಶಕ್ತಿ ಕೊಡಲಿ. ಪ್ರಕಾಶ ಬಾಬು ಮೈಸೂರು.

ಪ್ರೊ. ಕೆ.. ಭೈರವ ಮೂರ್ತಿ
bottom of page