ಪ್ರಾರ್ಥಿಸು
ಕವಯತ್ರಿ ಲಕ್ಷ್ಮಿ ಹೆಚ್ ದಾವಣಗೆರೆ ಅವರು ಜೀವನ ಪ್ರೀತಿ ಮತ್ತು ಶೃದ್ಧೆಗೆ ಇನ್ನೊಂದು ಹೆಸರು.ಅವರ ಊರು ಹಳೆ ಶಿವಮೊಗ್ಗಾದ ಚನ್ನಗಿರಿ.ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿರುವ ಲಕ್ಷ್ಮಿನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಂಗೀತ,ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಇವರು ನಮ್ಮ ಆಲೋಚನೆ.ಕಾಂ ಬಳಗದ ಆಪ್ತೇಷ್ಟರು ಹೌದು. ಸಂಪಾದಕ ಪ್ರಾರ್ಥಿಸು ಭಯಮೇ ನಿಕೃಷ್ಟಂ ಧೈರ್ಯಮೇ ಸರ್ವಸಾಧನಂ ಕುಗ್ಗಿತಗ್ಗದಿರು ನೀಂ ನಿಕೃಷ್ಟ ನರರಿಗೆ ಹರಿ ನುಡಿದಂತೆ ಶಾಂತವಾಗಿರು ಆದರೆ ಜಾಗೃತವಾಗಿರು ಮತ್ತೂ ನಡೆದು ವಿಶ್ರಾಂತಿ ಪಡೆ ಹೇಳಿರುವನವನು ಆದರೆ ಸಿದ್ಧವಾಗಿರು, ಮೃದುವಾಗಿರು ಆದರೆ ಚುರುಕಾಗಿರು, ವಿನೀತನಾಗಿರು ಆದರೆ ಆತ್ಮವಿಶ್ವಾಸದಿಂದ ಇರು. ಭಗವಂತ ಕರುಣಿಸಿದ ದಾರಿಯೊಳು ನೀ ಸಾಗೆ, ಬೇಡೆಲ್ಲ ಜನರ ಬೇಗೆ, ನೀನೇ ನಿನ್ನ ದಾರಿಯ ಸಹಚರ ಭಗವಂತನ ಒಳಗೊಂಡು ನಿನ್ನ ದಾರಿಯೊಳು ಏನ ಬೇಡುವೆ ಅವನ ನಿನ್ನ ನೀ ಅರಿತೊಡೆ, ಭಗವಂತನು ನಿನ್ನೊಳಿರುವಾಗ ಬೇಡಿಂತು ಪ್ರಭುವನು ಎನ್ನ ಪುಟ್ಟ ಕೈ ನಿನ್ನ ಕರದೊಳು ಇರಲಿ ದೇವ ಎಂದು ಮತ್ತೂ ಪ್ರಾರ್ಥಿಸಿಕೊ 'ನಿನ್ನ ದರ್ಶನವೆ ಎನ್ನ ಹೃದಯದೊಳಿರುವಾಗ, ನಿನ್ನ ದೃಢತೆಯು ಎನ್ನ ಮನದೊಳಗಿರುವಾಗ, ನಿನ್ನ ಚೇತನವು ಎನ್ನ ಕಾಲ್ಗಳಲಿರುವಾಗ. ಭಯವೇಕೊ ಪ್ರಭು ನಿನ್ನ ಬಲವು ಎನ್ನ ತೋಳ್ಗಳಲಿ ಇರುವಾಗ'ಎಂದೊಮ್ಮೆ. ಲಕ್ಷ್ಮಿ ಹೆಚ್ ದಾವಣಗೆರೆ