top of page

ನೆಮ್ಮದಿಯ ಹೋಮ

ಕಣ್ಣುರಿಸುವ ಹೊಗೆ-ಬೆಂಕಿ ಮನೆಯಲ್ಲಿ ಸುರುಕು-ಸುರ್ವಾಗಳ ಎಡೆಬಿಡದ ಏರಿಳಿತ ಅರ್ಘ್ಯಾದಿ ಐವತ್ನಾಲ್ಕು ಸಂಯುಕ್ತಗಳು ಅಗ್ನಿ ಪಾಲು, ಸುರುಕುಗಳ ಲೆಕ್ಕಕ್ಕೆ ಪ್ರತಿಯಾಗಿ ಮನೋವಾಂಛೆಗಳನೆಲ್ಲ ವರವಾಗಿಸುವ ದ್ವಿಪಕ್ಷ ಒಪ್ಪಂದ ದೇವರೊಡನೆ... ಅಗ್ನಿದೇವನ ಪ್ರೀತ್ಯರ್ಥ ಹವಿಸ್ಸುಗಳ ಪ್ರದಾನ ಮನೆಯಲ್ಲಿ ಅನಿಷ್ಟಗಳ ಕಳೆಯಲು, ಮನದಲ್ಲಲ್ಲ..!ಮನೆಯಲ್ಲಿ ನೆಮ್ಮದಿ ಮನೆ ಮಾಡಲು..! ಈ ಸದ್ದು ಗದ್ದಲದ‌ ನಡುವೆ ಫೋನು ರಿಂಗಣಿಸಿತು ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು.... ಅರೇ ಹಿತವಾಗಿದೆ ದನಿ ; ಭಾವ ಕೂಡ ; ಧರ್ಮ-ದೇಶ-ಕಾಲಾತೀತ ದೃಷ್ಟಿ. ಆದರೇನು? ಅದರದೇನು ಮಹತ್ವ? ಏಕೆಂದರೆ ಅದು ತಿಳಿಯುವಂತಿದೆ, ಗೊಂದಲಗಳಿಲ್ಲದೆ ಮನ ಮುಟ್ಟುವಂತಿದೆ.. ನಮಗೋ ತಿಳಿಯದ ಗೊಂದಲದಲ್ಲೇ ಸುಖ, ಶೋ ಆಫುಗಳಿಗಷ್ಟೇ ಲೆಕ್ಕ. - ಸಂತೋಷಕುಮಾರ ಅತ್ತಿವೇರಿ

ನೆಮ್ಮದಿಯ ಹೋಮ
bottom of page