top of page
ನೀನಿಲ್ಲದೆ ನಾನಿಲ್ಲ
ಸ್ನೇಹ ನೀನಿಲ್ಲದೆ ನಾನಿಲ್ಲ ನಿನ್ನಾಸರೆ ಜೊತೆಗಿರೆ ಜನ್ಮ ಪಾವನ ನೀನಿದ್ದಷ್ಟೂ ನಾನೇರುವೆ ಪ್ರೀತಿ,ಪ್ರೇಮದ ಏಣಿ ಸುಖ-ಶಾಂತಿ ಬಾಳಲಿ ನೀನದಕೆ ಸಾಕ್ಷಿ ಸಕಲ ಜೀವಿಗಳು ಬದುಕಿಹವು ನಿನ್ನಾಸರೆಯಲಿ ನೀನು ಮುಗುಳ್ನಕ್ಕರೊಂದು ಮುನಿದರೊಂದು ಬಾಳಿನ ತಿರುವು ಬಾಳ ದಾರಿಗೆಲ್ಲ ಬೆಳಕು ನೀನು ಎಸ್ಸೆಮ್ಮೆಸ್ ಗದ್ದಲದಲಿ ನಿನ್ನಾಳನರಿಯಲಸಾಧ್ಯ ಎಲ್ಲ ಬೂಟಾಟಿಕೆ ಎಸ್ಸೆಮ್ಮೆಸ್ ಭಾಷೆ ಅಪೂರ್ಣ ನಿನ್ನದೂ ಅದೇ ಸ್ಥಿತಿ! ಸ್ನೇಹಿತರಾರು ಎಂಬುದೇ ಗೊಂದಲ ನಾಗಪ್ಪ ಇರುವೆ ಒಪ್ಪಿರುವೆ ದೂರಾಗದಿರು ಸ್ನೇಹ ನೀನಿಲ್ಲದೆ ನಾನಿಲ್ಲ ಬಡವರಿರಲಿ ಶ್ರೀಮಂತರಿರಲಿ ನಿನಗಿಲ್ಲ ಭೇದ ಅದಕ್ಕೇ ನೀನಿರದಿರೆ ನನಗದೇ ಖೇದ! ಪ್ರೊ.ವೆಂಕಟೇಶ ಹುಣಶಿಕಟ್ಟಿ
bottom of page