top of page

ನಿನ್ನರಿವ ಪರಿ

ಹಾವು ಹೆಡೆಯೆತ್ತಿ ನಿಂತೊಡೆ ಹೊಂಗೆಮರವೆನಬಹುದೆ ಚೇಳ ಕೊಂಬಿಗೆ ಜೀಕಿ ಜೋಕಾಲಿಯೆನಬಹುದೆ ಕಳ್ಳಿ ಕನಿಕರಿಸಿ ಸುರಿಸಿದರೆ ಕುಡಿವ ಹಾಲದೊಗಬಹುದೆ ಮೊಸಳೆ ಬಾಗಿಸಿದರೆ ಬೆನ್ನ ದೋಣಿಯೆಂದೆನಬಹುದೆ ದುರುಳ ಮತಿಗಳ ದೂರೀಕರಿಸಿ ನಿನ್ನರಿವ ಪರಿಯ ತೋರೋ ಅಂತರಾಧೀಶಾ - ಕವಿತಾ ಹೆಗಡೆ ಅಭಯಂ

ನಿನ್ನರಿವ ಪರಿ
bottom of page